Thursday, February 13, 2025

ಮಾಟ ಮಂತ್ರ ಮಾಡುತ್ತಾಳೆ ಎಂದು ಸ್ವಂತ ಚಿಕ್ಕಮ್ಮನನ್ನೆ ಕೊ*ಲೆ ಮಾಡಿದ ಭೂಪ !

ಬಾಗಲಕೋಟೆ : ಸ್ನಾನಕ್ಕೆ ಎಂದು ಮನೆಯ ಹಿಂದೆ ಇದ್ದ ಹಿತ್ತಲಿಗೆ ಹೋಗಿದ್ದ ಮಹಿಳೆ ಕೊಲೆಯಾದ ಪ್ರಕರಣದಲ್ಲಿ ಪ್ರಮುಖ ಬೆಳವಣಿಗೆಯಾಗಿದ್ದು. ಕೊಲೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿ ಭೀಮಪ್ಪ ಮಾಂಗ್​ ಎಂಬಾತ ಸ್ವಂತ ಚಿಕ್ಕಮ್ಮನನ್ನೆ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಏನಿದು ಘಟನೆ ?

ಮನೆಯ ಹಿತ್ತಲಿಗೆ ಸ್ನಾನಕ್ಕೆಂದು ತೆರಳಿದ್ದ ಮಹಿಳೆ ಶೋಭಾ ಮಾಂಗ್ ಎಂಬಾಕೆಯ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಹಲ್ಲೆಯಿಂದ ತೀವ್ರ ರಕ್ತಸ್ರಾವವಾಗಿ ಮಹಿಳೆ ಸಾವನ್ನಪ್ಪಿದ್ದಳು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಜಮಖಂಡಿ ಪೊಲೀಸರು ಆರೋಪಿಯನ್ನು ಹುಡುಕಲು ಆರಂಭಿಸಿದ್ದರು.

ಇದನ್ನೂ ಓದಿ :ಡಿನ್ನರ್​ ಪಾಲಿಟಿಕ್ಸ್​ ನಡುವೆ ಟೆಂಪಲ್​ ರನ್​ ಕೈಗೊಂಡ ಡಿಕೆಶಿ : ನಾಳೆ ತಮಿಳುನಾಡಿಗೆ ಭೇಟಿ !

ಮಾಟ-ಮಂತ್ರ ಮಾಡುವ ಕಾರಣಕ್ಕೆ ಶುರುವಾದ ಜಗಳ, ಕೊಲೆಯಲ್ಲಿ ಅಂತ್ಯ !

ಬಾಗಲಕೋಟೆಯ ಮುತ್ತೂರು ಗ್ರಾಮದಲ್ಲಿ ಘಟನೆ ನಡೆದಿದ್ದು. ಗ್ರಾಮದ ಭೀಮಪ್ಪ ಮಾಂಗ್​ ಮತ್ತು ಶೋಭಾ ಮಾಂಗ್​ ಕುಟುಂಬಸ್ಥರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಕೊಲೆಯಾದ ಶೋಭಾ ಮಾಟ-ಮಂತ್ರ ಮಾಡುತ್ತಾಳೆ ಎಂಬ ಆರೋಪವು ಇತ್ತು. ಶೋಭಾ ಮಾಂಗ್​ ಭೀಮಪ್ಪನ ಕೆಲಸದಲ್ಲಿ ಅಡ್ಡಗಾಲು ಹಾಕುತ್ತಿದ್ದಳು. ಇದೇ ಕಾರಣಕ್ಕೆ ಇವರಿಬ್ಬರ ನಡುವೆ ಅನೇಕ ಭಾರಿ ಜಗಳವು ನಡೆದಿತ್ತು.

ಆದರೆ ನಿನ್ನೆ(ಜ.7) ಭೀಮಾ ಮಾಂಗ್​ ಮನೆಯ ಮುಂದೆ ನಿಂಬೆಹಣ್ಣು ಬಿದ್ದದ್ದ ಕಾರಣಕ್ಕೆ ಎರಡು ಮನೆಯ ನಡುವೆ ಮತ್ತೆ ಜಗಳ ಆರಂಭವಾಗಿತ್ತು. ಇದೇ ಜಗಳದಿಂದ ಕುಪಿತನಾಗಿದ್ದ ಭೀಮಾ ಮಾಂಗ್​ ಮಹಿಳೆ ಸ್ನಾನಕ್ಕೆ ಹೋಗಿದ್ದ ಸಮಯದಲ್ಲಿ ಭೀಮಾ ಮಾಂಗ್​ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಜಮಖಂಡಿ ಪೊಲೀಸರು ಬಂಧಿಸದ್ದಾರೆ.

ಘಟನೆ ಸಂಬಂಧ ಎಫ್​ಐಆರ್​ ದಾಖಲಾಗಿದ್ದು. ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ತನಿಖೆ ಒಳಪಡಿಸಿದ್ದಾರೆ ಎಂದು ಬಾಗಲಕೋಟೆ ಎಸ್​ಪಿ ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES