ಬೆಂಗಳೂರು : ಮಗನನ್ನು ಶಾಲೆಗೆ ಬಿಡಲು ಹೋಗುವ ವೇಳೆ ಅಪಘಾತವಾಗಿ 10 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು. ಟ್ರ್ಯಾಕ್ಟರ್ ಚಕ್ರದ ಕೆಳಗೆ ಬಿದ್ದ ಬಾಲಕನ ಮೇಲೆ ಟ್ರ್ಯಾಕ್ಟರ್ ಹರಿದು ಘಟನೆ ಸಂಭವಿಸಿದೆ.
ಬೆಂಗಳೂರಿನ ಹಗದೂರು ಮುಖ್ಯ ರಸ್ತೆ ವೈಟ್ಫೀಲ್ಡ್ನಲ್ಲಿ ಘಟನೆ ನಡೆದಿದ್ದು. ಮೃತ ಬಾಲಕ ಕಾಂಗೇದ್ರ ತಂದೆ ಮಗನನ್ನು ಶಾಲೆಗೆ ಡ್ರಾಪ್ ಮಾಡಲು ಕರೆದೊಯ್ಯುತ್ತಿದ್ದರು. ಈ ವೇಳೆ ಮುಂದೆ ಹೋಗುತ್ತಿದ್ದ ಟ್ರ್ಯಾಕ್ಟರ್ರನ್ನು ಓವರ್ ಟೇಕ್ ಮಾಡಲು ಮುಂದಾಗಿದ್ದಾರೆ. ಆದರೆ ಓವರ್ಟೇಕ್ ಮಾಡುವ ವೇಳೆ ಎದುರುಗಡೆಯಿಂದ ಮತ್ತೊಂದು ಬೈಕ್ ಬಂದಿದ್ದು. ಈ ವೇಳೆ ನಿಯಂತ್ರಣ ತಪ್ಪಿದ ಬೈಕ್ ಕೆಳಗೆ ಬಿದ್ದಿದೆ. ಈ ವೇಳೆ ಬಾಲಕ ಕಾಗೇಂದ್ರ ಪಕ್ಕದಲ್ಲಿ ಸಾಗುತ್ತಿದ್ದ ಟ್ರ್ಯಾಕ್ಟರ್ ಟ್ಯಾಂಕರ್ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಬಾಲಕನ ಮೇಲೆ ಟ್ಯಾಂಕರ್ ಹರಿದಿದೆ.
ಇದನ್ನೂ ಓದಿ :ಪಾಕಿಸ್ತಾನ ಪರ ಘೋಷಣೆ ಕೂಗಿದವರ ಚಾರ್ಜಶೀಟ್ ಹಾಕೋದನ್ನು ನಿಧಾನ ಮಾಡಿದ ಕುರಿತು ಚರ್ಚಿಸುತ್ತೇವೆ : ಪರಮೇಶ್ವರ್
ಕೆಳಗೆ ಬಿದ್ದ ಬಾಲಕನ ಮೈ ಮೇಲೆ ಟ್ಯಾಂಕರ್ ಹರಿದಿದ್ದು. ಬಾಲಕನನ್ನು ತಕ್ಷಣವೆ ಆಸ್ಪತ್ರೆಗೆ ದಾಖಲಿಸಿದರು ಬಾಲಕ ಸಾವನ್ನಪ್ಪಿದ್ದಾನೆ. ಘಟನೆ ಬಗ್ಗೆ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದು. ಶಾಲಾ ಆವರಣದಲ್ಲಿ ಟ್ಯಾಂಕರ್ ಓಡಾಟಕ್ಕೆ ನಿರ್ಧಿಷ್ಟ ಸಮಯವನ್ನು ನಿಗಧಿ ಪಡಿಸಲು ಆಗ್ರಹಿಸಿದ್ದಾರೆ.