Thursday, January 9, 2025

ಕೊಟ್ಟ ಹಣವನ್ನು ವಾಪಾಸ್​ ಕೇಳಿದ ಸ್ನೇಹಿತನಿಗೆ ಚಾಕು ಇರಿದ ಗೆಳೆಯ !

ಬೀದರ್ : ಕೊಟ್ಟ ಹಣ ವಾಪಸ್ ಕೇಳಿದ ಸ್ನೇಹಿತನಿಗೆ ಚಾಕು ಇರಿದಿರುವ ಘಟನೆ ಬೀದರ್​ನಲ್ಲಿ ನಡೆದಿದ್ದು. ಅಶೋಕ್​ ಪಾಟೀಲ್​ ಎಂಬಾತ ಆತನ ಸ್ನೇಹಿತ ದಯಾನಂದ ಶಿಂದೆಗೆ 10 ಸಾವಿರ ಸಾಲ ನೀಡಿದ್ದನು. ಇದನ್ನು ವಾಪಾಸ್​ ಕೇಳಿದ್ದಕ್ಕೆ ಕೋಪಗೊಂಡ ದಯಾನಂದ ಚಾಕು ಇರಿದಿದ್ದಾನೆ ಎಂದು ಮಾಹಿತಿ ದೊರೆತಿದೆ.

ಬಸವಕಲ್ಯಾಣ ತ್ರಿಪುರಾಂತ ನಿವಾಸಿ ಅಶೋಕ್ ಪಾಟೀಲ್ ತನ್ನ ಸ್ನೇಹಿತ ದಯಾನಂದ್​ಗೆ 10 ಸಾವಿರ ಸಾಲ ನೀಡಿದ್ದನು. ನಿನ್ನೆ (ಜ.07) ಸಂಜೆ ಬಾರ್​ನಲ್ಲಿ ಕುಡಿಯುತ್ತ ಅಶೋಕ್​ ಪಾಟೀಲ್​ಗೆ ಆರೋಪಿ ದಯಾನಂದ ಚಾಕು ಇರಿದಿದ್ದಾನೆ. ಏಕಾಏಕಿ ಬಂದು ಚಾಕು ಇರಿದಿದ್ದು. ಘಟನೆ ದೃಷ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಇದನ್ನೂ ಓದಿ : ರೋಡ್​ ರೇಜ್​ ಕೇಸ್​ : ಕ್ಯಾಬ್​ ಚಾಲಕನನ್ನು ಫಾಲೋ ಮಾಡಿ ಹಲ್ಲೆ ಮಾಡಿದ ಯುವಕರು !

ಘಟನೆ ಸಂಬಂಧ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪಿಎಸ್ಐ ಅಂಬರೀಶ್ ವಾಗ್ಮೋಡೆ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಇಂದು ಬೆಳಿಗ್ಗೆ ಆರೋಪಿ ದಯಾನಂದ ಶಿಂಧೆಯನ್ನು ಪೊಲೀಸರು ಬಂಧಿಸಿದ್ದಾರೆ. ಚಾಕು ಇರಿತದಿಂದ ಗಾಯಗೊಂಡಿರುವ ಅಶೋಕ್​ನನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES