ನಟ ಸೂರ್ಯ ಅಭಿನಯದ ಕಂಗುವಾ ಸಿನಿಮಾ ಕಳೆದ ವರ್ಷ ಸಿನಿಮಾ ಪ್ರೇಕ್ಷಕರಲ್ಲಿ ಹೆಚ್ಚು ಕುತೂಹಲ ಮೂಡಿಸಿದ್ದ ಸಿನಿಮಾವಾಗಿತ್ತು. ಆದರೆ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿತ ಎಂದರೆ ಇಲ್ಲಾ ಎನ್ನಬಹುದು. ಆದರೆ ಬಾಕ್ಸ್ ಆಫೀಸ್‌ನಲ್ಲಿ ಸೋತರು ಕೂಡ ಕಂಗುವ ಸಿನಿಮಾ ಆಸ್ಕರ್ ರೇಸ್ಗೆ ಸೆಲೆಕ್ಟ್ ಆಗಿದೆ. ಕಂಗುವಾದ ಜೊತೆಗೆ ಇನ್ನು 4 ಸಿನಿಮಾಗಳು ಆಸ್ಕರ್ ರೇಸ್ಗೆ ಸೆಲೆಕ್ಟ್ ಆಗಿವೆ.
2024ರಲ್ಲಿ ತಮಿಳು ಚಿತ್ರರಂಗವು ‘ಕಂಗುವಾ’ ಸಿನಿಮಾದ ಮೇಲೆ ಇನ್ನಿಲ್ಲದಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿತ್ತು. ನಟ ಸೂರ್ಯ ಅವರ ಕರಿಯರ್‌ಗೂ ಅದು ದೊಡ್ಡ ಬಜೆಟ್‌ನ ಸಿನಿಮಾ. ಬಾಕ್ಸ್ ಆಫೀಸ್‌ನಲ್ಲಿ ‘ಕಂಗುವಾ’ ಭಾರಿ ದೊಡ್ಡ ಗೆಲುವು ಪಡೆಯಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಚಿತ್ರವು ಹೀನಾಯ ಸೋಲು ಕಂಡಿತ್ತು. ಆದರೆ ಇದೀಗ ಈ ಸಿನಿಮಾ 97ನೇ ಆಸ್ಕರ್ ಅವಾರ್ಡ್ ರೇಸ್ನಲ್ಲಿದೆ.
ಇದನ್ನೂ ಓದಿ:ಪೊಲೀಸರು ಆಧುನಿಕರಣಗೊಂಡಿದ್ದಾರೆ, ರಾಜ್ಯದಲ್ಲಿ ಕ್ರೈಂ ರೇಟ್ ಕಡಿಮೆಯಾಗಿದೆ : ಪರಮೇಶ್ವರ್
ಬಾಕ್ಸಾಫೀಸ್‌ನಲ್ಲೂ ಈ ಸಿನಿಮಾ ಅಷ್ಟೇನೂ ಸದ್ದು ಮಾಡಿರಲಿಲ್ಲ. 350 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ ಗಳಿಸಿದ್ದು ಕೇವಲ 96 ಕೋಟಿ ರೂಪಾಯಿ. ಈ ಸವಾಲುಗಳ ನಡುವೆಯೂ ಕಂಗುವ ಆಸ್ಕರ್ ಅಂಗಳಕ್ಕೆ ಕಾಲಿಟ್ಟಿದೆ.
ಇನ್ನೆರಡು ತಿಂಗಳಲ್ಲಿ ಆಸ್ಕರ್ ಅಕಾಡೆಮಿ ಪ್ರಶಸ್ತಿ ನೀಡಲಾಗುತ್ತದೆ!
97ನೇ ಅಕಾಡೆಮಿ ಪ್ರಶಸ್ತಿಗಳ ಪ್ರದಾನಕ್ಕೆ ಕೇವಲ ಎರಡು ತಿಂಗಳು ಬಾಕಿ ಇವೆ. ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ಈ ವರ್ಷದ ಆಸ್ಕರ್‌ಗೆ ಅರ್ಹವಾದ 323 ಸಿನಿಮಾಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇವುಗಳಲ್ಲಿ 207 ಸಿನಿಮಾಗಳು ಪ್ರತಿಷ್ಠಿತ ಅತ್ಯುತ್ತಮ ಸಿನಿಮಾ ವಿಭಾಗಕ್ಕೆ ಅರ್ಹತಾ ಮಾನದಂಡಗಳನ್ನು ಪೂರೈಸಿವೆ.
207 ಸಿನಿಮಾಗಳ ಪೈಕಿ ಐದು ಭಾರತೀಯ ಸಿನಿಮಾಗಳು 207 ಅರ್ಹತೆಯ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ತಮಿಳಿನ ಸೂರ್ಯ ನಟನೆಯ ಕಂಗುವ, ಆಡುಜೀವಿತಂ (ದಿ ಗೋಟ್ ಲೈಫ್), ಸಂತೋಷ್, ಸ್ವಾತಂತ್ರ್ಯ ವೀರ್ ಸಾವರ್ಕರ್, ಮಲಯಾಳಂ-ಹಿಂದಿಯ ಆಲ್ ವಿ ಇಮ್ಯಾಜಿನ್ ಆಸ್ ಲೈಟ್, ಹಿಂದಿ-ಇಂಗ್ಲೀಷ್ ಭಾಷೆಯಲ್ಲಿ ತೆರೆಕಂಡ ಗರ್ಲ್ಸ್ ವಿಲ್ ಬಿ ಗರ್ಲ್ಸ್ ಸಿನಿಮಾಗಳು ನಾಮನಿರ್ದೇಶನಗೊಂಡಿವೆ.
ಈ ನಾಮನಿರ್ದೇಶನಗೊಂಡಿರುವ ಸಿನಿಮಾಗಳಿಗೆ ಮತದಾನ ಪ್ರಕ್ರಿಯೆ ಜನವರಿ 8ರಿಂದ ಆರಂಭಗೊಳ್ಳಲಿದೆ. ಜನವರಿ 12ರಂದು ಮತದಾನ ಮುಕ್ತಾಯಗೊಳ್ಳಲಿದೆ. ಈ ಅಂತಿಮ ನಾಮನಿರ್ದೇಶನಗೊಂಡ ಸಿನಿಮಾಗಳ ಹೆಸರನ್ನು ಜನವರಿ 17ರಂದು ಪ್ರಕಟಿಸಲಿದೆ. ಆಸ್ಕರ್-2025ರ ಸಮಾರಂಭವು ಮಾರ್ಚ್ 2ರಂದು ಓವೇಶನ್ ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿದೆ.