Wednesday, January 8, 2025

ಯಶ್​ ನೀಡಿದ ಹಣದಲ್ಲಿ ಈ ವರ್ಷ ಜೀವನ ಮಾಡಿದ್ದೇವೆ, ಆದರೆ ಮುಂದೆ ಹೇಗೆ ಎನ್ನುತ್ತಿರುವ ಕುಟುಂಬಸ್ಥರು

ಗದಗ : ಕಳೆದ ವರ್ಷ ರಾಕಿಂಗ್​ ಸ್ಟಾರ್​ ಯಶ್​ ಅವರ ಹುಟ್ಟು ಹಬ್ಬದ ದಿನ ಕಟೌಟ್​ ಕಟ್ಟಲು ಹೋಗಿದ್ದ ಯುವಕರು ವಿದ್ಯುತ್​ ಸ್ಪರ್ಷಿಸಿ ಸಾವನ್ನಪ್ಪಿದ್ದರು. ಮೃತ ಯುವಕರ ಕುಟುಂಬದರಿಗೆ ನಟ ಯಶ್​ ತಲಾ 5 ಲಕ್ಷ ಪರಿಹಾರವನ್ನು ನೀಡಿದ್ದರು. ಆದರೆ ಇಂದಿಗೂ ಮೃತ ಯುವಕರ ಕುಟುಂಬಸ್ಥರು ಕಣ್ಣೀರನಲ್ಲಿ ಕೈ ತೊಳೆಯುತ್ತಿದ್ದು. ಮಕ್ಕಳನ್ನು ನೆನೆದು ಕಣ್ಣೀರಿಡುತ್ತಿದ್ದಾರೆ.

ಹೌದು ಕಳೆದ ವರ್ಷ ಗದಗ ಜಿಲ್ಲೆಯ, ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಯುವಕರು ಯಶ್​ ಹುಟ್ಟು ಹಬ್ಬದ ಹಿನ್ನಲೆ ಕಟೌಟ್​ ಕಟ್ಟುತ್ತಿದ್ದರು. ಈ ವೇಳೆ ಕಟೌಟ್​ಗೆ ವಿದ್ಯುತ್​ ಸ್ಪರ್ಶಿಸಿ ಮೂವರು ಸಾವನ್ನಪ್ಪಿದ್ದರೆ. ನಾಲ್ಕು ಮಂದಿ ಗಾಯಗೊಂಡಿದ್ದರು. ಈ ವೇಳೆ ವಿದೇಶದಲ್ಲಿದ್ದ ಯಶ್​ ಮೃತರ ಕುಟುಂಬಸ್ಥರನ್ನು ಭೇಟಿ ನೀಡಿ. ಸಾತ್ವಾಂನ ಹೇಳಿದ್ದರು. ಜೊತೆಗೆ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರವನ್ನು ನೀಡಿದ್ದರು.

 

ಇದನ್ನೂ ಓದಿ :ತಮಿಳಿನ ಖ್ಯಾತ ನಟ ವಿಶಾಲ್​ ಆರೋಗ್ಯದಲ್ಲಿ ಏರುಪೇರು : ಅಪೋಲೋ ಆಸ್ಪತ್ರೆಗೆ ದಾಖಲು !

ಆದರೆ ಎದೆಯುದ್ದ ಬೆಳೆದಿದ್ದ ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಕಣ್ಣೀರು ಇಂದಿಗೂ ಕಡಿಮೆಯಾಗಿಲ್ಲ. ಇದರ ಬಗ್ಗೆ ಮಾತನಾಡಿರುವ ಯುವಕರ ಕುಟುಂಬಸ್ಥರು ‘ ಯಶ್​ ಬಂದು ನೀಡಿದ ಧನ ಸಹಾಯದಲ್ಲಿ ಒಂದು ವರ್ಷ ಜೀವನ ಸಾಗಿಸಿದ್ದೇವೆ. ಆದರೆ ಮುಂದೆ ಹೇಗೆ ಬದುಕಬೇಕು ಎಂದು ಮಕ್ಕಳನ್ನು ಕಳೆದುಕೊಂಡು ಕುಟುಂಬಸ್ಥರು ತಮ್ಮ ನೋವನ್ನು ತೋಡಿಕೊಳ್ಳುತ್ತಿದ್ದಾರೆ.

RELATED ARTICLES

Related Articles

TRENDING ARTICLES