Wednesday, January 8, 2025

ಹಾಸ್ಟೆಲ್​ ಹುಡುಗರನ್ನು ಕೋರ್ಟ್​ಗೆ ಎಳೆದ ಮೋಹಕ ತಾರೆ ರಮ್ಯ : 1 ಕೋಟಿ ಹಣಕ್ಕೆ ಬೇಡಿಕೆ !

ಬೆಂಗಳೂರು: ಮೋಹಕ ತಾರೆ ರಮ್ಯ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಚಿತ್ರತಂಡದ ವಿರುದ್ದ ಕೋರ್ಟ್ ಮೆಟ್ಟಿಲೇರಿದ್ದರು. ಅದರ ಮುಂದುವರಿದ ಪ್ರಕ್ರಿಯೆಯಲ್ಲಿ ಇಂದು ರಮ್ಯ ಇಂದು ಸಿಟಿ ಸಿವಿಲ್​ ಕೋರ್ಟ್​ನಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.

ಹಾಸ್ಟಲ್​ ಹುಡುಗರು ಸಿನಿಮಾದ ನಿರ್ಮಾಪಕರ ವಿರುದ್ದ ದಾವೆ ಹೂಡಿದ್ದ ರಮ್ಯ. ಸಿನಿಮಾದಲ್ಲಿ ತನ್ನ ಅನುಮತಿ ಪಡೆಯದೆ, ಸಿನಿಮಾದ ಟ್ರೈಲರ್​ ಮತ್ತು ಪ್ರೋಮೋದಲ್ಲಿ ತನ್ನ ದೃಷ್ಯವನ್ನು ಬಳಕೆ ಮಾಡಿದ್ದನ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದರು ಮತ್ತು ಈ ದೃಷ್ಯಗಳನ್ನು ತೆಗೆದು ಹಾಕುವಂತೆ ದಾವೆ ಹೂಡಿದ್ದರು. ಆದರೆ ಚಿತ್ರತಂಡ ರಮ್ಯ ಅಭಿನಯದ ದೃಷ್ಯಗಳನ್ನು ತಮ್ಮ ಸಿನಿಮಾದಲ್ಲಿ ಬಳಸಿಕೊಂಡಿತ್ತು.

ಇದನ್ನೂ ಓದಿ :ದೆಹಲಿ ಚುನಾವಣೆ ದಿನಾಂಕ ಘೋಷಣೆ : EVM ಆರೋಪಕ್ಕೆ ತಿರುಗೇಟು ಕೊಟ್ಟ ಚುನಾವಣಾ ಆಯೋಗ !

ಈ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ರಮ್ಯ ನ್ಯಾಯಾಲಯದ ಮೆಟ್ಟಿಲೇರಿದ್ದರು. ಚಿತ್ರ ತಂಡದ ವಿರುದ್ದ ದಾವೆ ಹೂಡಿ 1 ಕೋಟಿ ಹಣವನ್ನು ಪರಿಹಾರವಾಗಿ ನೀಡಬೇಕು ಎಂದು ಆಗ್ರಹಿಸಿದ್ದರು. ಇದೇ ವಿಚಾರಕ್ಕೆ ಇಂದು ನಟಿ ರಮ್ಯ ವಾಣಿಜ್ಯ ನ್ಯಾಯಾಲಯ ಸಂಕೀರ್ಣಕ್ಕೆ ಆಗಮಿಸಿದ್ದು. ದಾಖಲಾತಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ ಎಂದು ಮಾಹಿತಿ ದೊರೆತಿದೆ.

ಹಾಸ್ಟೆಲ್​ ಹುಡುಗರು ಸಿನಿಮಾ 2023ರ ಜುಲೈ 21ರಂದು ಬಿಡುಗಡಗೊಂಡಿತ್ತು. ಈ ಚಿತ್ರವನ್ನು ನಿತಿನ್​ ಕೃಷ್ಣಮೂರ್ತಿ  ನಿರ್ದೇಶನ ಮಾಡಿದ್ದರು ಮತ್ತು ವರುಣ್ ಹಾಗೂ ಪ್ರಜ್ವಲ್ ಬಿ ಪಿ ನಿರ್ಮಾಣ ಮಾಡಿದ್ದರು. ಈ ಸಿನಿಮಾದಲ್ಲಿ ನಟಿ ರಮ್ಯಾ ಲೆಕ್ಚರರ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

RELATED ARTICLES

Related Articles

TRENDING ARTICLES