ಮೈಸೂರು: ಕೇಕ್ ತಯಾರಿಸಲು ತಂದಿದ್ದ ಎಸೆನ್ಸ್ ಕುಡಿದು ಮೂವರಿ ಖೈದಿಗಳು ಅಸ್ವಸ್ಥರಾಗಿರುವ ಘಟನೆ ಮೈಸೂರಿನ ಜಿಲ್ಲಾ ಕಾರಾಗೃಹದಲ್ಲಿ ನಡೆದಿದ್ದು. ಓರ್ವ ಖೈದಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಮಾದೇಶ, ರಮೇಶ್ ಮತ್ತು ನಾಗರಾಜ್ ಕೆಲ ಪ್ರಕರಣದಲ್ಲಿ ಜೈಲು ಸೇರಿದ್ದರು. ಇವರು ಜೈಲಿನ ಬೇಕರಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಹೊಸ ವರ್ಷದ ಹಿನ್ನಲೆ ಕೇಕ್ ತಯಾರಿಸಲು ಸಾಮಾಗ್ರಿಗಳನ್ನು ತಂದಿರಸಲಾಗಿತ್ತು. ಇದರಲ್ಲಿ ಕೇಕ್ಗೆ ಬಳಸುವ ಎಸೆನ್ಸ್ನ್ನು ತರಲಾಗಿತ್ತು. ಆದರೆ ಈ ಮೂವರು ಕಿಕ್ಗಾಗಿ ಯಾರಿಗೂ ಹೇಳದೆ ಈ ಎಸೆನ್ಸ್ನ್ನು ಕುಡಿದಿದ್ದರು.
ಇದನ್ನೂ ಓದಿ :ಪರಸ್ತ್ರೀ ಜೊತೆ ಪತಿ ಪರಾರಿ : ಗಂಡನ ಪೋಟೋಗೆ ಮಸಿ ಬಳಿದ ಪತ್ನಿ !
ಆದರೆ ಈ ವಿಷಯವನ್ನು ಖೈದಿಗಳು ಯಾರಿಗೂ ಹೇಳಿರಲಿಲ್ಲ, ಕುಡಿದ ಕೆಲ ಸಮಯದ ನಂತರ ಈ ಮೂವರಿಗೂ ಹೊಟ್ಟೆ ನೋವು ಆರಂಭವಾಗಿದ್ದು. ಜೈಲಿನ ಆಸ್ಙತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಆಸ್ಪತ್ರೆಯಲ್ಲೂ ಖೈದಿಗಳು ನಿಜ ಹೇಳಿರಲಿಲ್ಲ. ಆದರೆ ಹೊಟ್ಟೆ ನೋವು ಕಡಿಮೆಯಾಗದ ಹಿನ್ನಲೆ ಮೂವರನ್ನು ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಇಂದು ಚಿಕಿತ್ಸೆ ಫಲಿಸದೆ ಮೈಸೂರಿನ ಸಾತನಳ್ಳಿ ಗ್ರಾಮದ ಮಾದೇಶ ಎಂಬಾತ ಸಾವನ್ನಪ್ಪಿದ್ದಾನೆ. ಈ ಆಸ್ಪತ್ರೆಯಲ್ಲಿ ಖೈದಿಗಳು ನಿಜವನ್ನು ಒಪ್ಪಿಕೊಂಡಿದ್ದು. ಎಸೆನ್ಸ್ ಕುಡಿದ್ದಿದ್ದೆವು ಎಂದು ಒಪ್ಪಿಕೊಂಡಿದ್ದಾರೆ. ಇನ್ನಿಬರು ಖೈದಿಗಳ ಸ್ಥಿತಿ ಗಂಭೀರವಾಗಿದ್ದು. ಘಟನೆ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುದೆ ಎಂದು ತಿಳಿದು ಬಂದಿದೆ.