ಟಿಬೆಟ್ನಲ್ಲಿ ಪ್ರಬಲ ಭೂಕಂಪ ಸಮಭವಿಸಿದ್ದು. ಮಂಗಳವಾರ ಬೆಳಗಿನ ಜಾವ 6:35ರ ಸಮಯದಲ್ಲಿ ಈ ಭೂಕಂಪ ಸಂಭವಿಸಿದೆ. ರಿಕ್ಟಪ್ ಮಾಪಕದಲ್ಲಿ 7.1ರಷ್ಟು ತೀವ್ರತೆ ದಾಖಲಾಗಿದ್ದು. ಈ ದುರಂತದಲ್ಲಿ ಇಲ್ಲಿಯವರೆಗೂ 53 ಜನರು ಸಾವನ್ನಪ್ಪಿದ್ದು. 63ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೃತರ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಚೀನಾದ ಮಾಧ್ಯಮಗಳ ಪ್ರಕಾರ, ಭೂಕಂಪನದ ಕೇಂದ್ರದ ಬಳಿ ಹಲವಾರು ಕಟ್ಟಡಗಳು ಕುಸಿದಿವೆ ಮತ್ತು ಸುತ್ತಮತ್ತಲಿನ ಪ್ರದೇಶದಲ್ಲಿಯೂ ಪ್ರಬಲವಾದ ಭೂಕಂಪನದ ಅನುಭವವಾಗಿದೆ ಎಂದುಇ ಚೀನಾದ ಪ್ರಮುಖ ಮಾಧ್ಯಮ ಸಂಸ್ಥೆ ಸಿಸಿಟಿವಿ ಮಾಹಿತಿ ಹಂಚಿಕೊಂಡಿದೆ.
ಇದನ್ನೂ ಓದಿ :ಚಿರತೆ ಬಾಲವಿಡಿದು ಬೋನಿಗೆ ಹಾಕಿದ ಯುವಕ , ಅರಣ್ಯ ಇಲಾಖೆ ಸಿಬ್ಬಂದಿಗಳು ಶಾಕ್ !
ಕೇವಲ ನೇಪಾಳ, ಟಿಬೆಟ್ ಮಾತ್ರವಲ್ಲದೆ ಭಾರತದ ಕೆಲವು ಕಡೆ ಕಂಪನದ ಅನುಭವವಾಗಿದ್ದು. ಬಿಹಾರದ ರಾಜಧಾನಿ ಪಾಟ್ನಾ ಸೇರಿದಂತೆ ಉತ್ತರದ ಅನೇಕ ರಾಜ್ಯದಲ್ಲಿ ಕಂಪನದ ಅನುಭವವಾಗಿದೆ ಎಂದು ತಿಳಿದು ಬಂದಿದೆ. ಪಶ್ಚಿಮ ಬಂಗಾಳ, ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲೂ ಭೂಕಂಒನದ ಅನುಭವವಾಗಿದೆ.