ಬೆಂಗಳೂರು : ಪವರ್ ಟಿ,ವಿ ಜೊತೆಗೆ ಎಕ್ಷ್ಕ್ಲೂಸಿವ್ ಆಗಿ ಮಾತನಾಡಿದ ರಚಿತಾ ರಾಮ್ ‘ ದರ್ಶನ್ ಅವರು ನನ್ನ ಇಂಡಸ್ಟ್ರಿ ಗುರುಗಳು. ಅಂದು ಅವರು ನನಗೆ ಚಾನ್ಸ್ ಕೊಡಲಿಲ್ಲ ಅಂದಿದ್ದರೆ ನಾನು ಮದುವೆ, ಮಕ್ಕಳಾಗಿ ಎಲ್ಲೋ ಇರುತ್ತಿದ್ದೆ ಎಂದು ಹೇಳಿದರು.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿರುವ ವಿಚಾರವಾಗಿ ಮಾತನಾಡಿದ ರಚಿತಾ ‘ಕಾಲವೇ ಎಲ್ಲಕ್ಕೂ ಉತ್ತರ ಕೊಡಲಿದೆ.. ಕಾಲಾಯ ತಸ್ಮೈ ನಮಃ ಅಂತ ಮಾತ್ರ ನಾನು ಹೇಳಬಲ್ಲೆ. ಆ ವಿಚಾರವನ್ನು ಕೇಳಿ ಎಲ್ಲರಂತೆ ನನಗೂ ಶಾಕ್ ಆಯ್ತು. ಆದರೆ ದರ್ಶನ್ ಅವರಿಗೆ ಈಗ ಬೇಲ್ ಸಿಕ್ಕಿದೆ. ಸದ್ಯದಲ್ಲೆ ಸತ್ಯ ಏನು ಎಂದು ಎಲ್ಲರಿಗೂ ಗೊತ್ತಾಗಲಿದೆ.
ಇದನ್ನೂ ಓದಿ : ನಟಿ ಹರಿಪ್ರಿಯಾ ಅದ್ದೂರಿ ಸೀಮಂತ ಶಾಸ್ತ್ರದ ಕಲರ್ ಪುಲ್ ಪೋಟೋಗಳು ಇಲ್ಲಿವೆ !
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡೋ ಅಂತೆ ಕಂತೆಗಳಿಗೆ ಸ್ಪಷ್ಟನೆ ನೀಡಿದ ರಚಿತಾ
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಕೆಲ ವಿಚಾರವಾಗಿ ಮಾತನಾಡಿದ ರಚಿತಾ ‘ನಾನು ಮಾಡುವ ಕೆಲಸಕ್ಕೆ ತಕ್ಕನಾದ ಕೂಲಿ(ಸಂಬಳ/ರೆಮ್ಯೂನರೇಷನ್) ಸಿಗುತ್ತಿದೆ. ನಾನು ತಪ್ಪು ಮಾಡಿದ್ದರೆ ಇಷ್ಟು ರಾಜರೋಶವಾಗಿ ಮೈಕ್ ಮುಂದೆ ಮಾತನಾಡುತ್ತಿರಲಿಲ್ಲ. ಸಾರ್ವಜನಿಕವಾಗಿ ಓಡಾಡಲು ಆಗುತ್ತಿರಲಿಲ್ಲ. ನಾನು ಕೆಲಸ ಮಾಡುತ್ತಿದ್ದೇನೆ, ನನ್ನ ಕೆಲಸ ಮಾತನಾಡಬೇಕೆ ಹೊರತು, ನಾವು ಮಾತನಾಡಬಾರದು ಎಂದು ಹೇಳಿದರು.
ಮುಂದುವರಿದು ಮಾತನಾಡಿದ ರಚಿತಾ ‘ ದರ್ಶನ್ಗಾಗಿ ವಿಜಯಲಕ್ಷ್ಮೀ ಸಾಕಷ್ಟು ಯುದ್ಧಗಳನ್ನ ಮಾಡಿ ಬಂದಿದ್ದಾರೆ. ನಾನು ಒಂದು ಕೋಟೆ ಸಂಭಾವನೆ ಪಡೆಯೊ ವಿಚಾರ ನನಗೆ, ನನ್ನ ಆಡಿಟರ್, CAಗೆ ಮಾತ್ರ ಗೊತ್ತು. ಅದಕ್ಕೆ ಪ್ರತಿಯಾಗಿ ನಾನು ಸರ್ಕಾರಕ್ಕೆ GST ಕಟ್ಟುತ್ತೇನೆ. ಹೀರೋಯಿನ್ ಗಳಿಗೆ ಸಂಭಾವನೆ ಕಮ್ಮಿ.. ಹೌದು.. ಆದರೆ ಹೆಚ್ಚು ಸಂಭಾವನೆ ಪಡೆಯುವಂತಹ ಕೆಲಸ ಮಾಡಬೇಕಿದೆ.ರಜನೀಕಾಂತ್ ಅವರ ಕೂಲಿ ಚಿತ್ರದ ಬಗ್ಗೆ ಅವರೇ ಅಫಿಶಿಯಲಿ ಅನೌನ್ಸ್ ಮಾಡ್ತಾರೆ.. ನನಗೆ ಆಫರ್ ಬಂದಿದ್ದು ನಿಜ.. ಮಾತುಕತೆ ಕೂಡ ಆಗಿದೆ ಎಂದು ಹೇಳಿದರು.