ಓಡಿ ಹೋಗಿರುವ ಮಾಸಾಬಿ ಸೈಯದ್ ಮತ್ತು ಬಸವರಾಜ್ ಪೋಟೊ
ಬೆಳಗಾವಿ : ವಾಣಿಶ್ರೀ ಮತ್ತು ಬಸವರಾಜ್ ಕಳೆದ 8 ವರ್ಷದ ಹಿಂದೆ ಮದುವೆಯಾಗಿದ್ದರು. ಇವರಿಬ್ಬರಿಗೆ ಮೂವರು ಮಕ್ಕಳು ಕೂಡ ಇದ್ದರು. ಆದರೆ ಬಸವರಾಜ್ ಪರಸ್ತ್ರೀ ಮೋಹದಿಂದ ತಾಳಿ ಕಟ್ಟಿದ ಪತ್ನಿಯನ್ನು ತ್ಯಜಿಸಿ ಬೇರಾಕೆಯೊಂದಿಗೆ ಓಡಿ ಹೋಗಿದ್ದಾನೆ. ಇದೀಗ ಆತನ ಪತ್ನಿ ವಾಣಿಶ್ರೀ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಟಿಬೆಟ್ನಲ್ಲಿ ಪ್ರಬಲ ಭೂಕಂಪ : 53 ಜನ ಸಾ*ವು , 60ಕ್ಕೂ ಹೆಚ್ಚು ಜನರಿಗೆ ಗಾಯ !
ಮಾರಿಹಾಳ ಗ್ರಾಮ ಪಂಚಾಯತಿಯ ಸದಸ್ಯೆಯಾಗಿರುವ ವಾಣಿಶ್ರೀ, ಬಸವರಾಜ್ ಜೊತೆ ಕಳೆದ 8 ವರ್ಷದ ಹಿಂದೆ ಮದುವೆಯಾಗಿದ್ದರು. ಆದರೆ ಗಂಡನಿಗೆ ಅದೇ ಗ್ರಾಮದ ಮಾಸಾಬಿ ಸೈಯದ್ ಎಂಬಾತನ ಜೊತೆಗೆ ಸಂಬಂಧ ಕೂಡ ಇತ್ತು. ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ವಾಣಿಶ್ರಿ ಪೊಲೀಸರಿಗೆ ಮನವಿ ಮಾಡಿದ್ದಳು. ಆದರೆ ಇದರ ಬಗ್ಗೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಇದನ್ನೂ ಓದಿ :ಬೆಳ್ಳಂಬೆಳಿಗ್ಗೆ ಜವರಾಯನ ಅಟ್ಟಹಾಸ : ಒಂದೇ ಕುಟುಂಬದ ಮೂವರು ಸಾ*ವು !
ಆದರೆ ಬಸವರಾಜ್ ಕಳೆದ ಒಂದು ವಾರದ ಹಿಂದೆ ತನ್ನ ಮಗನೊಂದಿಗೆ ಮಹಿಳೆ ಜೊತೆ ಎಸ್ಕೇಪ್ ಆಗಿದ್ದು. ಪತಿಯ ಮೇಲಿನ ಕೋಪಕ್ಕ ಪತ್ನಿ ಆತನ ಎಲ್ಲಾ ಪೋಟೋಗಳಿಗೂ ಮಸಿ ಬಳಿದಿದ್ದಾರೆ. ಪತಿ ಹೋಗಲಿ ಆದರೆ ನನ್ನ ಮಗನನ್ನು ತಂದು ಕೊಡಿ ಎಂದು ವಾಣಿಶ್ರೀ ಪೊಲೀಸರಿಗೆ ಒತ್ತಾಯ ಮಾಡಿದ್ದಾಳೆ.
ಇತ್ತ ಪರಾರಿಯಾಗಿರುವ ಯುವತಿ ಮಾಸಾಬಿಯೂ ತನ್ನ ಎರಡು ಮಕ್ಕಳೊಂದಿಗೆ ಪರಾರಿಯಾಗಿದ್ದು. ಆಕೆಯ ವಿರುದ್ದ ಪತಿ ಆಸೀಪ್ ಸೈಯದ್ ದೂರು ದಾಖಲಿಸಿದ್ದಾನೆ. ಚಿನ್ನಾಭರಣ, ನಗದು ಮತ್ತು ಕಾರಿನ ಜೊತೆಗೆ ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದಾನೆ. ಎರಡು ಕಡೆಯ ದೂರನ್ನು ದಾಖಲಿಸಿಕೊಂಡಿರುವ ಪೊಲೀಸರಿಗೆ ಈ ಪ್ರಕರಣ ತಲೆ ನೋವಾಗಿ ಪರಿಣಮಿಸಿದೆ.