Wednesday, January 8, 2025

ನಟಿ ಹರಿಪ್ರಿಯಾ ಅದ್ದೂರಿ ಸೀಮಂತ ಶಾಸ್ತ್ರದ ಕಲರ್​ ಪುಲ್​ ಪೋಟೋಗಳು ಇಲ್ಲಿವೆ !

ಕನ್ನಡದ ಕ್ಯೂಟ್​ ಕಪಲ್ಸ್ ‘ಸಿಂಹ ಪ್ರಿಯಾ’ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು. ನಿನ್ನೆ ನಟಿ ಹರಿಪ್ರಿಯಾಗೆ ಅದ್ದೂರಿಯಾಗಿ ಸೀಮಂತ ಶಾಸ್ತ್ರ ಮಾಡಲಾಗಿದೆ. ಈ ಕಾರ್ಯಾಕ್ರಮದಲ್ಲಿ ಹಿರಿಯ ನಟಿ ತಾರಾ, ಸುಧಾರಾಣಿ, ಮಾಳವಿಕ ಅವಿನಾಶ್​ ಸೇರಿದಂತೆ ಅನೇಕ ಚಿತ್ರರಂಗ ಆತ್ಮೀಯರು ಆಗಮಿಸಿ ಆರ್ಶಿವಾದ ಮಾಡಿದ್ದಾರೆ.

ನಟಿ ಹರಿಪ್ರಿಯಾರ ಸೀಮಂತ ಸಂಭ್ರಮವನ್ನು ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ನಡೆದಿದೆ. ಮಾಗಡಿ ರಸ್ತೆಯ ಖಾಸಗಿ ಸ್ಥಳದಲ್ಲಿ ನಡೆದಿರೋ ಈ ಕಾರ್ಯಕ್ರಮಕ್ಕೆ ಹಿರಿಯ ಕಲಾವಿದೆ ತಾರಾ ಭೇಟಿ ನೀಡಿ ಶುಭ ಹಾರೈಸಿದ್ದಾರೆ. ಇತ್ತೀಚೆಗೆ ಹರಿಪ್ರಿಯಾ ಬೇಬಿಬಂಪ್ ಪೋಟೋಶೂಟ್​ ನಡೆಸಿದ್ದರು.

ಸೀಮಂತ ಸಮಾರಂಭಕ್ಕೆ ಹರಿಪ್ರಿಯಾ ತಮ್ಮ ಎರಡೂ ಕೈಗಳಿಗೆ ಮೆಹಂದಿ ಹಾಕಿಸಿಕೊಂಡಿದ್ದರು. ಹಸಿರು, ತಿಳಿ ಕೆಂಪು ಬಣ್ಣದ ಸೀರೆಯಲ್ಲಿ ಸುಂದರವಾಗಿ ಕಾಣಿಸಿಕೊಂಡಿದ್ದರು. ನಟಿಯ ಮೊಗದಲ್ಲಿ ಗರ್ಭಿಣಿಯ ಕಳೆ ತುಂಬಿತ್ತು. ಕಾರ್ಯಕ್ರಮದ ಫೋಟೋ, ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಸದ್ಯದಲ್ಲೇ ಅಪ್ಪ, ಅಮ್ಮನಾಗಲಿರುವ ಸಿಂಹಪ್ರಿಯಾ ದಂಪತಿಗೆ ಅಭಿಮಾನಿಗಳು ಕೂಡಾ ಪ್ರೀತಿಯ ಧಾರೆಯೆರೆಯುತ್ತಿದ್ದಾರೆ.

2024ರ ನವೆಂಬರ್​​ 1ರಂದು ತಾವು ಪೋಷಕರಾಗುತ್ತಿರುವ ಸಿಹಿಸುದ್ದಿಯನ್ನು ನಟಿ ಹರಿಪ್ರಿಯಾ ಹಾಗೂ ನಟ ವಸಿಷ್ಠ ಸಿಂಹ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಅದಕ್ಕೂ ಒಂದೆರಡು ದಿನಗಳ ಮುನ್ನ ಹಂಚಿಕೊಂಡಿದ್ದ ಫೋಟೋ, ವಿಡಿಯೋಗಳಲ್ಲಿ ಹರಿಪ್ರಿಯಾ ಗರ್ಭಿಣಿ ಇರಬಹುದೆಂದು ಫ್ಯಾನ್ಸ್​ ಊಹಿಸಿದ್ದರು. ನಂತರ ಶೇರ್ ಮಾಡಿದ ಪೋಸ್ಟ್​ನಲ್ಲಿ ನಿಮ್ಮ ಊಹೆ ಸರಿ ಎಂಬುದನ್ನು ಕನ್ನಡ ಚಿತ್ರರಂಗದ ಬಹುಬೇಡಿಕೆ ತಾರೆ ಖಚಿತಪಡಿಸಿದ್ದರು.

4

5

6

8

RELATED ARTICLES

Related Articles

TRENDING ARTICLES