Wednesday, January 8, 2025

ತಮಿಳಿನ ಖ್ಯಾತ ನಟ ವಿಶಾಲ್​ ಆರೋಗ್ಯದಲ್ಲಿ ಏರುಪೇರು : ಅಪೋಲೋ ಆಸ್ಪತ್ರೆಗೆ ದಾಖಲು !

ಚೆನ್ನೈ: ಮಾಹಿತಿ ದೊರೆತಿದೆ. ಇನ್ನು ನಟ ವಿಶಾಲ್ ಅತಿಯಾದ ಜ್ವರ ಮತ್ತು ನಿಶ್ಯಕ್ತಿಯಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ತಮ್ಮ ಬಹುನಿರೀಕ್ಷಿತ ಚಿತ್ರವಾದ ಮದಗಜರಾಜ ಚಿತ್ರದ ಪ್ರಮೋಷನ್​ನಲ್ಲಿ  ಪಾಲ್ಗೊಂಡಿದ್ದ ನಟ ವಿಶಾಲ್​ ತೀವ್ರ ಅಸ್ವಸ್ಥರಾಗಿದ್ದರು. ಈ ವೇಳೆ ಅವರು ಮೈಕ್ ಹಿಡಿದಿದ್ದ ಕೈಗಳು ತೀವ್ರ ನಡುಗುತ್ತಿದ್ದವು. ಅವರ ಮಾತುಗಳು ಕೂಡ ತೊದಲುತ್ತಿದ್ದವು. ಇದನ್ನು ನೋಡಿದ ವಿಶಾಲ್​ ಅಭಿಮಾನಿಗಳಿಗೆ ಅವರ ಆರೋಗ್ಯ ಹದಗೆಟ್ಟಿದೆ ಎಂಬುದನ್ನು ಸಾಭೀತು ಪಡಿಸಿತ್ತು.

ಇದನ್ನೂ ಓದಿ :ಜೈಲಿನಲ್ಲಿ ಖೈದಿಗಳ ಎಡವಟ್ಟು : ಕೇಕ್​ ತಯಾರಿಸಲು ತಂದಿದ್ದ ಎಸೆನ್ಸ್​ ಕುಡಿದು ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ !

ಇದೀಗ ಅವರ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದ್ದರಿಂದ ಅವರನ್ನು ಚೆನ್ನೈನ ಪ್ರತಿಷ್ಠಿತ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ನಟ ವಿಶಾಲ್ ಅತಿಯಾದ ಜ್ವರ ಮತ್ತು ನಿಶ್ಯಕ್ತಿಯಿಂದ ಬಳಲುತ್ತಿದ್ದು. ವೈದ್ಯರ ಸಲಹೆಯ ಮೇರೆಗೆ ಅವರು ಚಿಕಿತ್ಸೆಗೆ ಒಳಗಾಗಿದ್ದಾರೆ.

ವಿಶಾಲ್​ ಆರೋಗ್ಯ ಸ್ಥಿತಿಯ ಬಗ್ಗೆ ವೈದ್ಯರು ಸ್ಪಷ್ಟನೆ ನೀಡಿದ್ದು. ವಿಶಾಲ್​ ವೈರಲ್​ ಫೀವರ್​ನಿಂದ ಬಳಲುತ್ತಿದ್ದಾರೆ. ಇದೀ ಕಾರಣಕ್ಕೆ ಅವರು ತೀವ್ರ ನಿಶ್ಯಕ್ತರಾಗಿದ್ದಾರೆ ಎಂದು ತಿಳಿದು ಬಂದಿದೆ. ಕೆಲ ದಿನಗಳವರೆಗೆ ವಿಶಾಲ್​ಗೆ ಸಂಪೂರ್ಣ ಬೆಡ್​ ರೆಸ್ಟ್​ ಅವಶ್ಯಕತೆ ಇದ್ದು. ಕೆಲ ದಿನಗಳ ಕಾಲ ವೈದ್ಯಕೀಯ ಮೇಲ್ವಿಚಾರಣೆಯಲ್ಲಿರುತ್ತಾರೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES