ದೆಹಲಿ : ರಾಷ್ಟ್ರ ರಾಜಧಾನಿ ದೆಹಲಿ ಚುನಾವಣೆಯ ದಿನಾಂಕ ಘೋಷಣೆಯಾಗಿದ್ದು. ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ರಾಜೀವ್ ಕುಮಾರ್ ಮತ್ತು ಇತರೆ ಚುನಾವಣಾ ಆಯೋಗದ ಅಧಿಕಾರಿಗಳು ಭಾಗವಹಿಸಿದ್ದರು. ಫೆಬ್ರವರಿ 5ನೇ ತಾರೀಖಿನಂದು ಚುನಾವಣೆಗೆ ಮೂಹರ್ತ ಘೋಷಣೆಯಾಗಿದೆ.
ಮಾಧ್ಯಮದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪಿ,ರಾಜೀವ್ ಕುಮಾರ್ ವಿಪಕ್ಷಗಳಿಂದ ಇವಿಎಂ ಮೇಲೆ ಬಂದ ಆರೋಪಗಳ ಮೇಲೆ ಅಸಮಧಾನ ವ್ಯಕ್ತಪಡಿಸಿದರು. ಜೊತೆಗೆ ವಿರೋಧ ಪಕ್ಷಗಳು ಪ್ರಶ್ನಿಸಿದ್ದ ಪ್ರತಿ ಪ್ರಶ್ನೆಗೂ ಉತ್ತರಿಸಿದ ರಾಜೀವ್ ಕುಮಾರ್. ಇವಿಎಂ ಬಗ್ಗೆ ಸುಪ್ರಿಂ ಕೋರ್ಟ್ ಮತ್ತು ಹೈಕೋರ್ಟ್ಗಳು ವಿವಿಧ ಪ್ರಕರಣದಲ್ಲಿ ನೀಡಿದ ತೀರ್ಪುಗಳನ್ನು ಉಲ್ಲೇಖಿಸಿದರು.
ದೆಹಲಿ 70 ವಿಧಾನ ಸಭೇಯನ್ನು ಹೊಂದಿದೆ. ಒಟ್ಟು 1.55 ಕೋಟಿ ಮತದಾರರಿದ್ದಾರೆ. ಈ ಬಾರಿ ಚುನಾವಣೆಯಲ್ಲಿ 13033 ವೋಟಿಂಗ್ ಪೋಲ್ಗಳನ್ನು ಸ್ಥಾಪಿಸಲಾಗುತ್ತದೆ. ಎಲ್ಲ ಪೋಲ್ಗಳಲ್ಲಿ ಮೂಲ ಸೌಕರ್ಯವನ್ನು ಕಲ್ಪಿಸಲಾಗುತ್ತದೆ ಮತ್ತು 85 ವರ್ಷಕ್ಕಿಂತೆ ಹೆಚ್ಚು ವಯಸ್ಸಾದವರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ.
ಜನವರಿ 17ನೇ ತಾರೀಕು ನಾಮಪತ್ರ ಸಲ್ಲಿಕೆ ಮಾಡಲು ಕೊನೆಯ ದಿನವಾಗಿದ್ದು. ದೆಹಲಿಯ ಚುನಾವಣೆ 5 ಫೆಬ್ರವರಿ 2025ರಂದು ನಡೆಯಲಿದೆ ಮತ್ತು 8 ಫೆಬ್ರವರಿ 2025ಕ್ಕೆ ಫಲಿತಾಂಶ ಹೊರಬರಲಿದೆ. 10ನೇ ತಾರೀಕಿಗೆ ಚುನಾವಣೆಯ ಎಲ್ಲಾ ಪ್ರಕ್ರಿಯೆಗಳು ಮುಗಿಯಲಿದೆ. ಈ ಚುನಾವಣೆಯ ಜೊತೆಗೆ ಬೇರೆ ಯಾವುದೇ ರಾಜ್ಯದಲ್ಲಿ ಉಪಚುನಾವನೆ ನಡೆಯೊದಿಲ್ಲ ಎಂದು ಹೇಳಿದರು.