ಮುಂಬೈ : ನಟ ಸಲ್ಮಾನ್ ಖಾನ್ ತಮ್ಮ ಮುಂಬೈ ನಿವಾಸ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ಗೆ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಅವರ ಮನೆಯನ್ನು ಬುಲೆಟ್ ಪ್ರೂಫ್ ಗಾಜು ಮತ್ತು ವಿದ್ಯುತ್ ಬೇಲಿಯಿಂದ ಭದ್ರಪಡಿಸಲಾಗಿದೆ. ಮನೆಯನ್ನು ನವೀಕರಿಸುತ್ತಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.
ಸಲ್ಮಾನ್ ಖಾನ್ ಆಪ್ತನಾಗಿದ್ದ ಬಾಬಾ ಸಿದ್ದಿಕ್ಕಿಯನ್ನು ಬಿಷ್ಣೋಯ್ ಗ್ಯಾಂಗ್ ಹತ್ಯೆ ಮಾಡಿದ ನಂತರ ಸಲ್ಲು ಭಾಯ್ಗೆ ಬರುತ್ತಿದ್ದ ಬೆದರಿಕೆ ಕರೆಗಳು ಹೆಚ್ಚಾಗಿದ್ದವು. ಇದರ ಹಿನ್ನಲೆಯಲ್ಲಿ ಸಲ್ಮಾನ್ ಖಾನ್ಗೆ ಹೆಚ್ಚಿನ ಭದ್ರತೆಯನ್ನು ಕಲ್ಪಿಸಲಾಗಿದೆ.
ಸಲ್ಮಾನ್ ಖಾನ್ ಮನೆಯ ಬಾಲ್ಕನಿಯನ್ನು ನೀಲಿ ಬಣ್ಣದ ಬುಲೆಟ್ ಪ್ರೂಫ್ ಗಾಜಿನಿಂದ ಮುಚ್ಚಿಸಿದ್ದು. ಮನೆಯ ಸುತ್ತಾ ವಿದ್ಯುತ್ ಪ್ರಹರಿಸುತ್ತಿರುವ ತಂತಿಯನ್ನು ಅಳವಡಿಸಲಾಗಿದೆ. ಏತನ್ಮಧ್ಯೆ, ಸಲ್ಮಾನ್‌ಗೆ Y+ ಭದ್ರತೆ (ವೈ-ಪ್ಲಸ್) ಮತ್ತು ಈಗ ಅವರ ಕಾರಿನೊಂದಿಗೆ ಪೊಲೀಸ್ ಬೆಂಗಾವಲು ವಾಹನವಿದೆ. ಹೆಚ್ಚುವರಿಯಾಗಿ, ಸಿಕಂದರ್ ನಟನನ್ನು ರಕ್ಷಿಸಲು ಎಲ್ಲಾ ಶಸ್ತ್ರಾಸ್ತ್ರಗಳನ್ನು ನಿರ್ವಹಿಸುವಲ್ಲಿ ತರಬೇತಿ ಪಡೆದ ಕಾನ್ಸ್ಟೇಬಲ್ ಅನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ :ಯಶ್ ನೀಡಿದ ಹಣದಲ್ಲಿ ಈ ವರ್ಷ ಜೀವನ ಮಾಡಿದ್ದೇವೆ, ಆದರೆ ಮುಂದೆ ಹೇಗೆ ಎನ್ನುತ್ತಿರುವ ಕುಟುಂಬಸ್ಥರು
2024ರ ಏಪ್ರೀಲ್ನಲ್ಲಿ ಸಲ್ಮಾನ್ ಖಾನ್ ಮನೆಗೆ ಅಪರಿಚಿತರು ಗುಂಡು ಹಾರಿಸಿ ಪಲಾಯನ ಮಾಡಿದ್ದರು. ಆದರೆ ಈ ಸಮಯದಲ್ಲಿ ಯಾರಿಗೂ ಹೆಚ್ಚಿನ ಹಾನಿಯಾಗಿರಲಿಲ್ಲ.
ಇವೆಲ್ಲದರ ನಡುವೆ ಸಲ್ಮಾನ್ ಖಾನ್ ಬಿಗ್ಬಾಸ್ ಸೀಸನ್ 18ರಲ್ಲಿ ನಿರೂಪಕರಾಗಿ ಕಾರ್ಯನಿರ್ವಹಿಸುತ್ತಿದ್ದು. ಸಿಕಂದರ್ ಎಂಬ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ. ಈ ಚಿತ್ರ ಇದೇ ವರ್ಷ ಏಪ್ರಿಲ್ನಲ್ಲಿ ತೆರೆಗೆ ಬರಲಿದೆ ಎಂದು ಮಾಹಿತಿ ದೊರೆತಿದೆ.