ಛತ್ತೀಸ್‌ಗಢದ ಬಿಜಾಪುರದಲ್ಲಿ ನಾಪತ್ತೆಯಾಗಿದ್ದ ಪರ್ತಕರ್ತರ ಮುಖೇಶ್ ಚಂದ್ರಕಾರ್ ಶವವಾಗಿ ಪತ್ತೆಯಾಗಿದ್ದರು. ಇದೀಗ ಅವರ ಕೊಲೆಯ ಭೀಕರತೆ ಜಗತ್ತಿನ ಎದುರು ಪ್ರದರ್ಶನವಾಗಿದ್ದು. ಪರ್ತಕರ್ತನ ಹೃದಯವನ್ನು ಸೀಳಿ, ಆತನ ಯಕೃತ್ನ್ನು 4 ಭಾಗವಾಗಿ ತುಂಡಾಗಿಸಿ ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಮೃತ ಯುವಕನ ಮರಣೋತ್ತರ ಪರೀಕ್ಷೆ ಮಾಡಿರುವ ವೈದ್ಯರು ತನ್ನ ವೃತ್ತಿ ಜೀವನದಲ್ಲಿ ಇಂತಹ ದೃಷ್ಯವನ್ನು ಕಂಡಿಲ್ಲ ಎಂದು ಹೇಳಿದ್ದಾರೆ.
ಯಾರಿದು ಮುಖೇಶ್ ಚಂದ್ರಶೇಖರ್ ?
ಮುಖೇಶ್ ಚಂದ್ರಕಾರ್ ಒಬ್ಬ ಸ್ವತಂತ್ರ್ಯ ಪರ್ತಕರ್ತನಾಗಿ ಕೆಲಸ ನಿರ್ವಹಿಸುತ್ತಿದ್ದನು. ಜೊತೆಗೆ ಖಾಸಗಿ ವಾಹಿನಿಗಳಿಗೆ ಕೊಡುಗೆ ವರದಿಗಾರನಾಗಿಯೂ ಕೆಲಸ ಮಾಡುತ್ತಿದ್ದನು. ಅದರ ಜೊತೆಗೆ ‘ಬಸ್ತಾರ್ ಜಂಕ್ಷನ್ ‘ ಎಂಬ ಯೂಟ್ಯೂಬ್ ಚಾನಲ್ನ್ನು ನಡೆಸುತ್ತಿದ್ದನು. ಈ ಚಾನೆಲ್ಗೆ ಸುಮಾರು 1.59 ಲಕ್ಷ ಚಂದದಾರರು ಕೂಡ ಇದ್ದರು.
ಇದನ್ನೂ ಓದಿ :
ಆದರೆ ಡಿಸೆಂಬರ್ 25 ರಂದು ಖಾಸಗಿ ವಾಹಿನಿಯಲ್ಲಿ ಮುಖೇಶ್ ಬಿಜಾಪುರದ ರಸ್ತೆ ನಿರ್ಮಾಣ ಯೋಜನೆಯಲ್ಲಿನ ಭ್ರಷ್ಟಾಚಾರವನ್ನು ಬಹಿರಂಗಪಡಿಸಿ ವರದಿಯನ್ನು ಭಿತ್ತರಿಸಿದ್ದರು. ಇದನ್ನು ಭಿತ್ತರಿಸಿದ ನಂತರ ಕಳೆದ ಬುದವಾರ ಮುಖೇಶ್ ಕಾಣೆಯಾದನು. ನಂತರ ಈತನ ಸಹೋದರ ಗುರುವಾರ ಕಾಣೆಯಾದ ದೂರು ದಾಖಲಿಸಿದ್ದರು.
ದೂರನ್ನು ದಾಖಲಿಸಿಕೊಂಡಿದ್ದ ಪೊಲೀಸರು ಮುಖೇಶ್ಗಾಗಿ ಹುಡುಕಾಟ ಆರಂಭಿಸಿದ್ದರು. ಮುಖೇಶ್ ಮೊಬೈಲ್ ಲೋಕೆಶನ್ ಟ್ರೇಸ್ ಮಾಡಿದ ಪೊಲೀಸರಿಗೆ ಕಳೆದ ಶುಕ್ರವಾರ ಬಿಜಾಪುರದ ಛತ್ತನ್‌ಪಾರಾ ಬಸ್ತಿಯಲ್ಲಿನ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಮುಖೇಶ್ ಶವ ಪತ್ತೆಯಾಗಿತ್ತು. ಕಾಂಗ್ರೆಸ್ ಮುಖಂಡ ಸುರೇಶ್ ಚಂದ್ರಕರ್ ಎಂಬಾತನ ಭ್ರಷ್ಟಚಾರವನ್ನು ಬಯಲಿಗೆ ಎಳೆದಿದ್ದಕ್ಕೆ ಕೊಲೆ ಮಾಡಲಾಗಿದೆ ಎಂದು ಅನುಮಾನ ವ್ಯಕ್ತಪಡಿಸಲಾಗಿದೆ.
ಮೃಗಗಳ ರೀತಿಯಲ್ಲಿ ಕೊಲೆ ಮಾಡಿರುವ ದುಷ್ಕರ್ಮಿಗಳು !
ಪರ್ತಕರ್ತರ ಮುಖೇಶ್ ಚಂದ್ರಶೇಖರ್ ಮೃತದೇಹದ ಮರಣೋತ್ತರ ವರದಿ ಹೊರ ಬಂದಿದ್ದು. ಈ ವರದಿಯಲ್ಲಿನ ಅಂಶಗಳು ನಿಜಕ್ಕೂ ಭಯನಕವಾಗಿದೆ.
ಮುಕೇಶ್ ಚಂದ್ರಾಕರ್ ಅವರ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರ ಪ್ರಕಾರ, ಅವರಿಗೆ 5 ಮುರಿದ ಪಕ್ಕೆಲುಬುಗಳು ಮತ್ತು 4 ಯಕೃತ್ತಿನ(ಲಿವರ್) ತುಂಡುಗಳು ಪತ್ತೆಯಾಗಿವೆ. ತಮ್ಮ 12 ವರ್ಷಗಳ ವೃತ್ತಿ ಜೀವನದಲ್ಲಿ ಇಂತಹ ಕ್ರೌರ್ಯವನ್ನು ಕಂಡಿರಲಿಲ್ಲ ಎಂದು ವೈದ್ಯರು ಒಪ್ಪಿಕೊಂಡಿದ್ದಾರೆ. ಜೊತೆಗೆ ಮುಖೇಶ್ ತಲೆಯಲ್ಲಿ ಸುಮಾರು 15ಕ್ಕೂ ಹೆಚ್ಚು ಗಾಯಗಳಾಗಿದ್ದು. ಹೃದಯಕ್ಕೆ ತೀವ್ರತರವಾದ ಗಾಯವಾಗಿದೆ. ಜೊತೆಗೆ ಹೊಟ್ಟೆ, ಎದೆ, ಬೆನ್ನು ಸೇರಿದಂತೆ ದೇಹದ ಪ್ರತಿ ಭಾಗದಲ್ಲೂ ಗಾಯವಾಗಿದೆ. ಮೃತದೇಹವನ್ನು ಕೈಮೇಲಿನ ಹಚ್ಚೆ ಮೂಲಕ ಗುರುತಿಸಲಾಗಿದೆ ಎಂದು ತಿಳಿದು ಬಂದಿದೆ.
ಹೈದರಾಬಾದ್ನಲ್ಲಿ ಆರೋಪಿ ಬಂಧನ !
ಪತಕರ್ತನ ಕೊಲೆ ಪ್ರಕರಣವನ್ನು ತನಿಖೆ ನಡೆಸಲು ಛತ್ತೀಸಗಡ ಸರ್ಕಾರ ಎಸ್ಐಟಿಯನ್ನು ರಚನೆ ಮಾಡಿತ್ತು. ಕೊಲೆ ಪ್ರಕರಣದ ಕಾರ್ಯಚರಣೆಗೆ ಇಳಿದ ಪೊಲೀಸರಿಗೆ ಹೈದರಾಬಾದ್ನಲ್ಲಿ ಸುರೇಶ್ ಎಂಬಾತನನ್ನು ಬಂಧಿಸಿದ್ದು. ಕೊಲೆ ಮಾಡಿದ ನಂತರ ಆರೋಪಿ ತಲೆಮರಿಸಿಕೊಂಡಿದ್ದನು ಎಂದು ತಿಳಿದು ಬಂದಿದೆ. ವೃತ್ತಿಯಲ್ಲಿ ಗುತ್ತಿಗೆದಾರನಾಗಿರುವ ಈತನು ಕೂಡ ಭ್ರಷ್ಟಚಾರದಲ್ಲಿ ಪಾಲುದಾರನಾಗಿದ್ದನು ಎಂದು ಶಂಕಿಸಲಾಗಿದೆ.