ಹುಬ್ಬಳ್ಳಿ : ಪೊಲೀಸರಿಂದಲೇ ಭೀಕರ ಅಪಘಾತವಾಗಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದ್ದು. ಜೀಪಿನಡಿ ಸಿಲುಕಿದ ಬೈಕ್ನ್ನು ಸುಮಾರ 3 ಕಿ.ಮೀ ಎಳೆದೊಯ್ಯಲಾಗಿದೆ ಎಂದು ಮಾಹಿತಿ ದೊರೆತಿದೆ.
ನಿಂತಿದ್ದ ಬೈಕ್ಗೆ ಪೊಲೀಸ್ ಜೀಪ್ ಡಿಕ್ಕಿಯಾಗಿದ್ದು. ಡಿಕ್ಕಿಯಾದ ನಂತರ ಬೈಕ್ನ್ನು ಸುಮಾರು 3 ಕಿ,ಮೀ ಎಳೆದೊಯ್ಯಲಾಗಿದೆ. ಗದಗದ ಡಿ,ಆರ್ ಇನ್ಸ್ಪೆಕ್ಟರ್ ಶಂಕರ್.S.ಚೌದರಿ ಅವರ ಸರ್ಕಾರಿ ವಾಹನದಿಂದ ಈ ಕೃತ್ಯವಾಗಿದೆ. ಜೀಪ್ ಚಾಲಕ ಮುತ್ತು ಮುಗಳಿ ಅಪಘಾತ ಮಾಡಿದ್ದು. ಜೀಪ್ನಡಿ ಸಿಲುಕಿದ ಬೈಕ್ ಅಪ್ಪಚ್ಚಿಯಾಗಿದೆ. ಘಟನಾ ಸ್ಥಳಕ್ಕೆ ಡಿಸಿಪಿ ರವೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನು ಓದಿ:ನವಜಾತ ಶಿಶುವನ್ನು ಚರಂಡಿಗೆ ಎಸೆದ ತಾಯಿ : ಕೊರೆವ ಚಳಿಯಲ್ಲಿ ರಾತ್ರಿ ಕಳೆದ ಮಗು !
ಇಲ್ಲಿಯವರೆಗೂ ಬೈಕ್ ಸವಾರ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದ್ದು. ಈ ಘಟನೆ ಏಕೆ ನಡೆಯಿತು ಎಂಬ ಬಗ್ಗೆ ಇನ್ನಷ್ಟೆ ಹೆಚ್ಚಿನ ಮಾಹಿತಿ ದೊರಕಬೇಕಿದೆ.