Wednesday, January 8, 2025

ತೀವ್ರ ಹೃದಯಾಘಾತ : ಶಿಕ್ಷಕರ ಎದುರೆ ಕುಸಿದು ಬಿದ್ದು ಬಾಲಕಿ ಸಾ*ವು !

ಚಾಮರಾಜನಗರ : ಶಿಕ್ಷಕರ ಎದುರಿಗೆ ಕುಸಿದು ಬಿದ್ದು 9 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಚಾಮರಾಜನಗರದ ಸೆಂಟ್ ಪ್ರಾನ್ಸಿಸ್ ಶಾಲೆಯಲ್ಲಿ ನಡೆದಿದ್ದು. ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಚಾಮರಾಜನಗರದ ಸೆಂಟ್ ಪ್ರಾನ್ಸಿಸ್ ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದಳು. ಎಂದಿನಂತೆ ಇಂದು ಶಾಲೆಗೆ ಬಂದಿದ್ದ ತೇಜಸ್ವಿನಿ ತರಗತಿಯಲ್ಲಿ ಪಾಠ ಕೇಳುತ್ತಿದ್ದ ವೇಳೆ ಏಕಾಏಕಿ ತೀವ್ರ ಹೃದಯಘಾತದಿಂದ ಕುಸಿದು ಬಿದ್ದಿದ್ದಾಳೆ. ತಕ್ಷಣ ಎಚ್ಚೆತ್ತ ಶಿಕ್ಷಕರು ಮಗುವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಮಾರ್ಗ ಮಧ್ಯದಲ್ಲೆ ಮಗು ಸಾವನ್ನಪ್ಪಿದೆ.

ಇದನ್ನೂ ಓದಿ :‘ಕೃಷ್ಣಂ ಪ್ರಣಯ ಸಖಿ’ ನಾಯಕಿ ಶರಣ್ಯ ಶೆಟ್ಟಿ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ !

ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದ್ದು. ಸ್ಥಳಕ್ಕೆ ಶಾಲಾ ಶಿಕ್ಷಣ ಇಲಾಖೆಯ ಬಿಇಓ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES