Tuesday, January 7, 2025

ರಾಕಿಭಾಯ್​ ಹುಟ್ಟುಹಬ್ಬಕ್ಕೆ ಸಿಗಲಿದೆ ಸಿಹಿ ಸುದ್ದಿ : ಟಾಕ್ಸಿಕ್​ ಸಿನಿಮಾ ಟೀಸರ್​ ರಿಲೀಸ್​ !

“ಟಾಕ್ಸಿಕ್”​ ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಬಹುನಿರೀಕ್ಷಿತ ಚಿತ್ರದ ಬಗ್ಗೆ ಜನರಿಗೆ ಸಾಕಷ್ಟು ಕುತೂಹಲವಿದ್ದು, ಈ ಬಗ್ಗೆ ಯಶ್​ ಜನ್ಮದಿನದಂದು ಅಪ್ಡೇಟ್​​​ ಸಿಗುವ ಸಾಧ್ಯತೆ ದಟ್ಟವಾಗಿದೆ. ಇದೇ ಸಾಕ್ಷಿ ಎಂಬಂತೆ ಯಶ್​ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ ಹಾಕುವ ಮೂಲಕ ಕ್ಯೂರಿಯಾಸಿಟಿ(Curiosity) ಹೆಚ್ಚಿಸಿದ್ದಾರೆ.

ಕೆಜಿಎಫ್ 2 ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಪಡೆದ ಬಳಿಕ ನಟ ಯಶ್ ಮುಂದಿನ ಸಿನಿಮಾ ಯಾವುದು, ಯಾರ ಜೊತೆ ಸಿನಿಮಾ ಮಾಡ್ತಾರೆ ಎನ್ನುವ ಕುತೂಹಲ ಹೆಚ್ಚಾಗಿತ್ತು. ಎರಡು ವರ್ಷಗಳ ಬಳಿಕ ಕೊನೆಗೂ ಯಶ್ 2023ರ ಡಿಸೆಂಬರ್ ತಿಂಗಳಿನಲ್ಲಿ ತಮ್ಮ ಮುಂದಿನ ಸಿನಿಮಾವಾದ ಟಾಕ್ಸಿಕ್​ ಸಿನಿಮಾದ ಟೈಟಲ್ ಘೋಷಣೆ ಮಾಡಿದ್ದರು. ಟೈಟಲ್ ಅನೌನ್ಸ್ ಮಾಡಿದ್ದು ಬಿಟ್ಟರೆ ಈವರೆಗೂ ಸಿನಿಮಾ ಬಗ್ಗೆ ಯಾವ ಮಾಹಿತಿಯೂ ಹೊರಬಂದಿಲ್ಲ.

ಇದನ್ನೂ ಓದಿ :ಗ್ಯಾಸ್​ ಸಿಲಿಂಡರ್​ ಸ್ಪೋಟ : ಸಂಪೂರ್ಣ ಮನೆ ಛಿದ್ರ ಛಿದ್ರ !

ಆದರೆ ಅಭಿಮಾನಿಗಳ ಸತತ ಕಾಯುವಿಕೆಯ ನಂತರ ನಟ ಯಶ್​ ಮತ್ತು ಟಾಕ್ಸಿಕ್ ಸಿನಿಮಾದ ನಿರ್ಮಾಣ ಸಂಸ್ಥೆ KVN ಕೊನೆಗು ಗುಡ್​ ಕೊಟ್ಟಿದ್ದು. ರಾಕಿ ಭಾಯ್​ ಹುಟ್ಟು ಹಬ್ಬದ ದಿನ , ಅಂದರೆ ಜನವರಿ 8ರಂದು ಬೆಳಿಗ್ಗೆ 10:25 ನಿಮಿಷಕ್ಕೆ ಟಾಕ್ಸಿಕ್​ ಸಿನಿಮಾದ ಬಗ್ಗೆ ಬಹು ಮಹತ್ವದ ಮಾಹಿತಿ ಹೊರಬೀಳಲಿದೆ ಎಂದು ತಿಳಿದು ಬಂದಿದೆ. ಇದರ ಬಗ್ಗೆ ಈಗಾಗಲೇ ಅನೇಕ ಊಹಾಪೋಹಗಳು ಹರುದಾಡುತ್ತಿದ್ದು. ಟೀಸರ್​ನ ತುಣುಕು ಹೊರಬೀಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

 

RELATED ARTICLES

Related Articles

TRENDING ARTICLES