ಮೈಸೂರು: ನವಜಾತ ಗಂಡು ಮಗುವನ್ನು ಚರಂಡಿಗೆ ಎಸೆದಿರುವ ಘಟನೆ ಮೈಸೂರಿನಲ್ಲಿ ನಡೆದಿದ್ದು. ರಾಕ್ಷಸಿ ತಾಯಿಯೊಬ್ಬಳು ಆಗ ತಾನೆ ಜನಿಸಿದ್ದ ಮಗುವನ್ನು ಚರಂಡಿಗೆ ಎಸೆದು ಹೋಗಿದ್ದಾಳೆ.
ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ರಾಜೇಗೌಡನಹುಂಡಿ ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು. ಮಗುವನ್ನು ಚರಂಡಿಗೆ ಎಸೆದು ಹೋಗಿದ್ದಾರೆ. ಕೊರೆವ ಚಳಿಯಲ್ಲಿ, ಚರಂಡಿ ನೀರಿನಲ್ಲಿ ಆಗ ತಾನೆ ಜನಿಸಿದ್ದ ಹಸುಗೂಸು ಇಡೀ ರಾತ್ರಿಯನ್ನು ಕಳೆದಿದೆ. ಇಂದು ಬೆಳಗಿನ ಜಾವ ಮಗುವಿನ ಅಳುವನ್ನು ಗಮನಿಸಿದ ಗ್ರಾಮದ ಆಶಾ ಕಾರ್ಯಕರ್ತೆ ಸರೋಜಮ್ಮ ಮಗುವನ್ನು ಆರೈಕೆ ಮಾಡಿ ಹೆಚ್.ಡಿ ಕೋಟೆ ಮಗು ಹಾರೈಕೆ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಇದನ್ನೂ ಓದಿ : OYO ರೂಂ ಬೇಕಾದರೆ ಮದುವೆಯಾಗಿ : ಏನಿದು ಓಯೋದ ಹೊಸ ನಿಯಮ !
ಅಕ್ರಮ ಸಂಬಂಧದಲ್ಲಿ ಮಗು ಜನಿಸಿದ್ದು, ಅದಕ್ಕೆ ಮಗುವನ್ನು ಚರಂಡಿಗೆ ಎಸೆದಿದ್ದಾರೆ ಎಂದು ಶಂಕಿಸಿದ್ದು. ಘಟನೆ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಹೆಚ್.ಡಿ.ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.