Tuesday, January 7, 2025

ಗ್ಯಾಸ್​ ಸಿಲಿಂಡರ್​ ಸ್ಪೋಟ : ಸಂಪೂರ್ಣ ಮನೆ ಛಿದ್ರ ಛಿದ್ರ !

ಅನೇಕಲ್ : ಅಡುಗೆ ಅನಿಲವನ್ನು ತುಂಬಿಸಿದ್ದ ಗ್ಯಾಸ್​ ಸಿಲಿಂಡರ್​ ಬ್ಲಾಸ್ಟ್​ ಆಗಿ ಸಂಪೂರ್ಣ ಮನೆ ಛಿದ್ರವಾಗಿರುವ ಘಟನೆ ಅನೇಕಲ್​ ತಾಲ್ಲೂಕಿನ ಕಿತ್ತಗಾನಹಳ್ಳಿ ಎಂಬಲ್ಲಿ ಸಂಭವಿಸಿದೆ. ಈ ಸ್ಪೋಟದಲ್ಲಿ ಇಬ್ಬರು ಗಾಯಗೊಂಡಿದ್ದಾರೆ.

ಸಿಲಿಂಡರ್​ ಸ್ಪೋಟದ ತೀವ್ರತೆಗೆ ಮನೆಯ ಗೋಡೆಗಳು ನೆಲಕ್ಕೆ ಉರುಳಿದ್ದು. ಮನೆಯಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೇವಲ ಸ್ಪೋಟಗೊಂಡ ಮನೆಯಲ್ಲದೆ, ಅಕ್ಕ ಪಕ್ಕದ ನಿವಾಸಿಗಳ ಮನೆಗೂ ಹಾನಿಯಾಗಿದ್ದು. ಅಕ್ಕಪಕ್ಕದಲ್ಲಿ ನಿಲ್ಲಿಸಿದ್ದ ಅನೇಕ ವಾಹನಗಳು ಜಖಂ ಆಗಿವೆ. ಸ್ಪೋಟದ ತೀವ್ರತೆಗೆ ವಾಟರ್​ ಪೈ ಕಿತ್ತು ಅಪಾರ ಪ್ರಮಾಣದ ನೀರು ಹೊರಬಂದಿದೆ.

ಇದನ್ನೂ ಓದಿ :ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ ಬಾಲಕಿ ಸೆಂಟ್ರಿಂಗ್​ ಮರ ಬಿದ್ದು ಸಾವು !

ಸ್ಪೋಟದಲ್ಲಿ ಗಾಯಗೊಂಡ ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.

 

RELATED ARTICLES

Related Articles

TRENDING ARTICLES