Wednesday, January 8, 2025

ಭೀಕರ ನಕ್ಸಲ್​ ದಾಳಿಗೆ 9 ಯೋಧರು ಹುತಾತ್ಮ : ಸ್ಪೋಟದ ಭೀಕರತೆಗೆ ಛಿದ್ರಗೊಂಡ ಸೇನಾ ವಾಹನ !

ಛತ್ತೀಸಗಡ್ದ ಬಿಜಾಪುರ ಜಿಲ್ಲೆಯಲ್ಲಿ ಭೀಕರ ನಕ್ಸಲ್​ ದಾಳಿ ನಡೆದಿದ್ದು. ಈ ದಾಳಿಯಲ್ಲಿ ಸುಮಾರು 9 ಜನ ಯೋಧರು ಮೃತಪಟ್ಟಿದ್ದಾರೆ ಎಂದು ಮಾಹಿತಿ ದೊರೆತಿದೆ. ಮಾವೋವಾದಿಗಳ ಈ ದಾಳಿಗೆ ಛತ್ತೀಸಗಡ ಮುಖ್ಯಮಂತ್ರಿ ಖಂಡನೆ ವ್ಯಕ್ತಪಡಿಸಿದ್ದಾರೆ.

ನಕ್ಸಲ್​ ಕಾರ್ಯಚರಣೆ ಮುಗಿಸಿ ವಾಪಾಸ್​ ಬರುತ್ತಿದ್ದ ಯೋಧರ ವಾಹನವನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದ್ದು. ಬಿಜಾಪುರ ಜಿಲ್ಲೆಯ ಕುಟ್ರುವಿನ ಅಂಬೇಲಿ ನಾಲಾ ಬಳಿ ನೆಲಬಾಂಬ್ ಸ್ಫೋಟಿಸುವ ಮೂಲಕ ನಕ್ಸಲ್​ಗಳು ಯೋಧರ ವಾಹನವನ್ನು ಸ್ಪೋಟಿಸಿದ್ದಾರೆ. ಸ್ಪೋಟದ ತೀವ್ರತೆಗೆ ಸೇನಾವಾಹನ ಪುಡಿಪುಡಿಯಾಗಿದ್ದು. ಯೋಧರ ದೇಹಗಳು ತುಂಡು, ತುಂಡಾಗಿವೆ.

ಇದನ್ನೂ ಓದಿ :ತೀವ್ರ ಹೃದಯಾಘಾತ : ಶಿಕ್ಷಕರ ಎದುರೆ ಕುಸಿದು ಬಿದ್ದು ಬಾಲಕಿ ಸಾ*ವು !

20ಕ್ಕೂ ಹೆಚ್ಚು ಸೇನಾ ಸಿಬ್ಬಂದಿಯಿದ್ದ ವಾಹನವನ್ನು ಗುರಿಯಾಗಿಸಿಕೊಂಡಿ ಈ ದಾಳಿ ನಡೆದಿದೆ. IED ಬಳಸಿಕೊಂಡಿ ಈ ದಾಳಿಯನ್ನು ನಡೆಸಲಾಗಿದೆ. ದಾಳಿಯ ತೀವ್ರತೆಗೆ ರಸ್ತೆಯಲ್ಲಿ ಸುಮಾರು 10 ಅಡಿಗೂ ಹೆಚ್ಚು ಆಳದ ಗುಂಡಿ ನಿರ್ಮಾಣವಾಗಿದೆ. ಹುತಾತ್ಮ ಯೋಧರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮಾಹಿತಿ ದೊರೆತಿದೆ.

 

RELATED ARTICLES

Related Articles

TRENDING ARTICLES