Wednesday, January 8, 2025

ದೇಶದಲ್ಲಿ 3ನೇ HMP ವೈರಸ್ ಸೋಂಕು​ ಪತ್ತೆ : ಬೆಂಗಳೂರಿನ ನಂತರ ಗುಜರಾತ್​ ಸರದಿ !

ಗಾಂಧಿನಗರ: ಕರ್ನಾಟಕದಲ್ಲಿ ಎರಡು HMP ವೈರಸ್ ಪ್ರಕರಣಗಳು ವರದಿಯಾದ ನಂತರ ಗುಜರಾತ್‌ನಲ್ಲಿ  ಮತ್ತೊಂದು ಹೆಚ್‌ಎಮ್‌ಪಿವಿ ಸೋಂಕು ಪತ್ತೆಯಾಗಿದೆ. ಚೀನಾದಲ್ಲಿ ಕಾಡುತ್ತಿರುವ ಹ್ಯೂಮನ್ ಮೆಟಾನ್ಯೂಮೋ ವೈರಸ್ ಭಾರತಕ್ಕೂ ಕಾಲಿಟ್ಟಿದ್ದು ಈಗಾಗಲೇ  ಭಾರತದಲ್ಲಿ ಸುಮಾರು 3 ಪ್ರಕರಣಗಳು ಪತ್ತೆಯಾಗಿದೆ ಎಂದು ಮಾಹಿತಿ ದೊರೆತಿದೆ.

ಕೇಂದ್ರ ಆರೋಗ್ಯ ಇಲಾಖೆ ಕರ್ನಾಟಕದಲ್ಲಿ ಎರಡು HMP ವೈರಸ್ ಪತ್ತೆಯಾಗಿರುವ ಕುರಿತು ವರದಿ ಮಾಡಿದ್ದು. ಬೆಂಗಳೂರುನ ಖಾಸಗಿ ಆಸ್ಪತ್ರೆಯಲ್ಲಿ 8 ತಿಂಗಳ ಮಗು ಮತ್ತು 3 ತಿಂಗಳ ಮಗುವಿನಲ್ಲಿ ಸೋಂಕು ಧೃಡಪಟ್ಟಿದೆ. ಇದರ ಬೆನ್ನಲ್ಲೆ ಗುಜರಾತ್​ನಲ್ಲಿ ಮತ್ತೊಂದು ಪ್ರಕರಣ ವರದಿಯಾಗಿದ್ದು ಇದು ಗುಜರಾತ್​ನ ಮೊದಲ HMP ವೈರಸ್​ ಪ್ರಕರಣವಾಗಿದೆ.

ಇದನ್ನೂ ಓದಿ: HMP ವೈರಸ್​ ಅಪಾಯಕಾರಿ​ ಅಲ್ಲ, ನಾವು ಮುಂಜಾಗ್ರತ ಕ್ರಮ ಕೈಗೊಳ್ಳುತ್ತೇವೆ : ಸಿದ್ದರಾಮಯ್ಯ

ಗುಜರಾತ್​ನ 2 ತಿಂಗಳ ಮಗುವಿನಲ್ಲಿ ಈ ಸೋಂಕು ಧೃಡಪಟ್ಟಿದ್ದು. ಮಗುವನ್ನು ಅಹಮದಾಬಾದ್‌ನ ಚಂದ್‌ಖೇಡಾ ಪ್ರದೇಶದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

 

RELATED ARTICLES

Related Articles

TRENDING ARTICLES