ಶೆನ್ಜನ್ : ಕಳೆದ ಎರಡು ದಿನಗಳಿಂದ ಚೀನಾದಲ್ಲಿ ಹೊಸ HMPV ಎಂಬ ವೈರಸ್ ಬಗ್ಗೆ ಅನೇಕ ಸುದ್ದಿಗಳು ಹರಿದಾಡುತ್ತಿದ್ದು. ಸಾಮಾಜಿಕ ಜಾಲತಾಣದಲ್ಲಿಯೂ ಅನೇಕ ವಿಡಿಯೋಗಳು ವೈರಲ್ ಆಗಿವೆ. ಈ ಕುರಿತು ಅನೇಕ ಜಾಗತಿಕ ಮಾಧ್ಯಮಗಳು ಸುದ್ದಿಯನ್ನು ಬಿತ್ತರಿಸಿವೆ. ಆದರೆ ಈ ಕುರಿತು ಚೀನಾದಲ್ಲಿ ನೆಲೆಸಿರುವ ಕನ್ನಡದ ಯುಟ್ಯೂಬರ ಒಬ್ಬರು ಸ್ಪಷ್ಟನೆ ನೀಡಿದ್ದು. ಚೀನಾದಲ್ಲಿ ಯಾವುದೇ ವೈರಸ್ ಭಾದೆ ಭಾದಿಸುತ್ತಿಲ್ಲ ಎಂದು ಹೇಳಿದ್ದಾರೆ.
ಕೊರೋನ ರೀತಿಯಲ್ಲಿ ಮತ್ತೊಂದು ವೈರಾಣು ಚೀನಾವನ್ನು ಭಾದಿಸುತ್ತಿದೆ ಎಂಬ ವಿಷಯ ದೇಶದಾದ್ಯಂತ ಭಿತ್ತರವಾಗಿತ್ತು. ಇದರ ಕುರಿತು ಅನೇಕ ಅಂತರ್ರಾಷ್ಟ್ರೀಯ ಮಾಧ್ಯಮಗಳು ವರದಿಯನ್ನು ಭಿತ್ತರಿಸಿದ್ದವು. ಆದರೆ ಇದರ ಕುರಿತು ಚೀನಾದಲ್ಲಿ ನೆಲೆಸಿರುವ Shashi4x Kannada ಎಂಬ ಯೂಟ್ಯೂಬರ್ ವಿಡಿಯೋ ಮಾಡಿದ್ದು. ಚೀನಾದಲ್ಲಿ ಯಾವುದೇ ವೈರಾಣು ಭಾಧಿಸುತ್ತಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ :ಕೆಂಡವಾದ ಕಲಬುರಗಿ : ಪ್ರತಿಭಟನೆಗೆ ಬಂದ ಬಿಜೆಪಿಯವರಿಗೆ ಕಾಫಿ, ಟೀ ವ್ಯವಸ್ಥೆ ಮಾಡಿದ ಪ್ರಿಯಾಂಕ್ ಖರ್ಗೆ
ಚೀನಾದ ಶೆನ್ಜನ್ ಎಂಬ ರಾಜ್ಯದಿಂದ ವಿಡಿಯೋ ಮಾಡಿರುವ ಯೂಟ್ಯೂಬರ್. ಆಸ್ಪತ್ರೆ ಮುಂಭಾಗದಲ್ಲೆ ವಿಡಿಯೋ ಮಾಡಿದ್ದಾರೆ. ಜೊತೆಗೆ ಮೆಟ್ರೋ ನಿಲ್ದಾಣಗಳು, ಶಾಂಪಿಗ್ ಸೆಂಟರ್ಗಳು, ಪ್ರವಾಸಿ ತಾಣಗಳಲ್ಲಿ ವಿಡಿಯೋ ಮಾಡಿದ್ದು. ಆ ಸ್ಥಳಗಳಲ್ಲಿ ಜನರು ಮಾಸ್ಕ್ ಧರಿಸದೆ ಓಡಾಡುತ್ತಿರುವುದನ್ನು ತೋರಿಸಿದ್ದಾರೆ. ಈ ರೀತಿಯಾಗಿ ಚೀನಾದಲ್ಲಿ ಯಾವುದೇ ಸಾಂಕ್ರಾಮಿಕ ಖಾಯಿಲೆ ಇಲ್ಲ ಎಂದು ಕನ್ನಡದ ಯೂಟ್ಯೂಬರ್ ಹೇಳಿದ್ದಾರೆ.
ಆದರೆ ಚೀನಾದ ಕೆಲವು ಭಾಗಗಳಲ್ಲಿ ಈ ವೈರಸ್ ಉಲ್ಬಣವಾಗಿದೆ ಎಂದು ಕೆಲವು ರೋಗಿಗಳು ಚೀನಾದಿಂದಲೆ ಮಾತನಾಡಿದ್ದು. ಚೀನಾದ ಕೆಲವು ಭಾಗಗಳಲ್ಲಿ ಮಾತ್ರ ಈ ವೈರಸ್ ಇರಬಹುದು ಎಂದು ಸಹ ಕೆಲವರು ವಿಶ್ಲೇಷಿಸುತ್ತಿದ್ದಾರೆ.