ಶಿವಮೊಗ್ಗ: ನಗರದಲ್ಲಿ ಸುದ್ದಿಗೋಷ್ಟಿ ಮಾಡಿ ಮಾತನಾಡಿದ ಬಿಜೆಪಿಯ ರಾಜ್ಯಧ್ಯಕ್ಷ ವಿಜಯೇಂದ್ರ ಕಾಂಗ್ರೆಸ್ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು. ಈ ವೇಲೆ ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ದಿ ಎಂಬುದು ಶೂನ್ಯವಾಗಿದೆ. ಯಾವುದೇ ಅಭಿವೃದ್ದಿ ಕಾರ್ಯಗಳಿಗು ಶಂಕು ಸ್ಥಾಪನೆಯಾಗಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು 2 ವರ್ಷಗಳಾಗಿವೆ. ಆದರೆ ಇವರಿಂದ ಇಲ್ಲಿ ಅಭಿವೃದ್ದಿಯಾಗುತ್ತಿಲ್ಲ. ಇದನ್ನು ನಾವು ಹೇಳಿದರೆ ವಿರೋಧ ಪಕ್ಷದವರು ಹೇಳುತ್ತಾರೆ ಎಂದು ಹೇಳುತ್ತಾರೆ, ಆದರೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರೆ ಇದರ ಕುರಿತು ಮಾತನಾಡುತ್ತಿದ್ದಾರೆ. ಕ್ಷೇತ್ರದಲ್ಲಿ ತಲೆ ಎತ್ತಿಕೊಂಡು ಓಡಾಡಲು ಆಗುತ್ತಿಲ್ಲ ಎಂದು ಹೇಳುತ್ತಿದ್ದಾರೆ.
ಇದನ್ನೂ ಓದಿ:ಅಂಗನವಾಡಿಯ ಮೇಲ್ಚಾವಣಿ ಗಾರೆ ಕುಸಿತ : ಸ್ವಲ್ಪದರಲ್ಲೆ ಪಾರಾದ ಪುಟ್ಟ ಮಕ್ಕಳು !
ಪ್ರಿಯಾಂಕ್ ಖರ್ಗೆ ವಿರುದ್ದ ಕಾಂಗ್ರೆಸ್ನಲ್ಲೆ ಷಡ್ಯಂತ್ರ ನಡೆಯುತ್ತಿದೆ !
ಗುತ್ತಿಗೆ ದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಕುರಿತು ಮಾತನಾಡಿದ ಬಿ ವೈ ವಿಜಯೇಂದ್ರ ‘ ಇಂದು ಕಲಬುರಗಿಯಲ್ಲಿ ಪ್ರಿಯಾಂಕ್ ಖರ್ಗೆ ಅವರ ಮನೆಗೆ ಮುತ್ತಿಗೆ ಹಾಕುವ ಕೆಲಸ ಇತ್ತು, ಆದರೆ ಪಕ್ಷದ ಮುಖಂಡರ ನಿಧನರಾದ ಕಾರಣ ಇಲ್ಲಿಗೆ ಬಂದೆ.
ಕಾಂಗ್ರೆಸ್ ಮುಖಂಡ ರಾಜು ಕಪ್ಪನೂರ್ ಪ್ರಿಯಾಂಕ ಖರ್ಗೆಯ ಎಡಗೈ ಬಂಟ. ಈ ಪುಡಾಯರಿಯ ಬೆದರಿಕೆಯಿಂದ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಪ್ರಕರಣದ ಪ್ರಾಮಾಣಿಕ ತನಿಖೆ ಸಾಧ್ಯವಿಲ್ಲ ಎಂದು ಕುಟುಂಬಸ್ಥರು ಹೇಳಿದ್ದಾರೆ. ಇದರಿಂದ ಪ್ರಿಯಾಂಕ್ ಖರ್ಗೆ ತುಂಬಾ ಭಯಭೀತರಾಗಿದ್ದಾರೆ. ಮಹಾರಾಷ್ಟ್ರದಿಂದ ಸುಪಾರಿ ಕಿಲ್ಲರ್ ಗಳನ್ನು ಕರೆಸಿ ಸ್ವಾಮಿಜಿಗಳನ್ನು ಟಾರ್ಗೆಟ್ ಮಾಡಿದ್ದಾರೆ. ನಮ್ಮ ಶಾಸಕ ಹಾಗೂ ಚಂದು ಪಾಟೀಲ್ ಹತ್ಯೆ ಮಾಡಲು ಪ್ಲಾನ್ ಮಾಡಿದ್ದಾರೆ. ವಿರೋಧ ಪಕ್ಷದವರು ಬೆಳೆದರೆ ಇವರ ಬೆಳೆ ಬೇಯಿಸಿಕೊಳ್ಳಲು ಸಾಧ್ಯವಿಲ್ಲ ಅಂತ ಹೀಗೆ ಮಾಡಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರು ಮಾತಾಡುತ್ತಿರುವುದು ಸರಿಯಲ್ಲ, ಪ್ರಿಯಾಂಕ್ ಖರ್ಗೆಯವರೇ ನಿಮ್ಮ ಸ್ನೇಹಿತನಾಗಿ ಸಲಹೆ ಕೊಡುತ್ತಿದ್ದೇನೆ, ನಿಮ್ಮ ಪಾತ್ರ ಇಲ್ಲ ಎಂದರೆ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಿ. ಸಿಬಿಐ ತನಿಖೆ ಬಗ್ಗೆ ಅನುಮಾನ ಪಡಬೇಡಿ, ಜಾರ್ಜಗೆ ಕ್ಲೀನ್ಚಿಟ್ ಕೊಟ್ಟಿದ್ದು ಸಿಬಿಐ. ಜೊತೆಗೆ ನೀವು ಸಿದ್ದರಾಮಯ್ಯರನ್ನು ನಂಬಬೇಡಿ, ನಿಮ್ಮ ವಿರುದ್ದವೇ ನಿಮ್ಮ ಪಕ್ಷದಲ್ಲೆ ಷಡ್ಯಂತ್ರ ನಡೆಯುತ್ತಿದೆ. ನೀವು ಮುಖ್ಯಮಂತ್ರಿ ಆದರೂ ನಮಗೆ ಸಮಸ್ಯೆ ಇಲ್ಲ. ಆದರೆ ತನಿಖೆಯನ್ನು ಸಿಬಿಐಗೆ ಕೊಡಿ ಎಂದು ಹೇಳಿದರು.
ಇದನ್ನೂ ಓದಿ :ಓವರ್ಟೇಕ್ ಮಾಡುವ ಬರದಲ್ಲಿ ಅಪಘಾತ : ಕಸದ ಲಾರಿ ಹರಿದು ಇಬ್ಬರು ಮಹಿಳೆಯರ ಸಾ*ವು !
ಶಕ್ತಿ ಯೋಜನೆಯಿಂದ ಬಸ್ ಟಿಕೆಟ್ ದರವನ್ನು ಹೆಚ್ಚಳ ಮಾಡಿದ್ದಾರೆ !
ಬಸ್ ಟಿಕೆಟ್ ದರವನ್ನು ಹೆಚ್ಚಳ ಮಾಡಿದ ಕುರಿತು ಮಾತನಾಡಿದ ವಿಜಯೇಂದ್ರ ‘ ಶಕ್ತಿ ಯೋಜನೆಗೆ ಹಣವನ್ನು ಹೊಂದಿಸಲು ಸಾಧ್ಯವಾಗದೆ , ಸಾವಿರಾರು ಕೋಟಿ ನಷ್ಟ ಎದುರಿಸುತ್ತಿದ್ದಾರೆ. ಇಂದು ಸಾರಿಗೆ ಸಂಸ್ಥೆಯನ್ನು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಿಳೆಯರಿಗೆ ಉಚಿತ ಪುರುಷರಿಗೆ ಹೊರೆ ಖಚಿತ ಎನ್ನುವ ಕೆಲಸ ಆಗಿದೆ
ಹಣಕಾಸಿನ ಪರಿಸ್ಥಿತಿ ಅಧೋಗತಿಗೆ ಹೋಗಿದೆ, ಹೆಚ್ಚು ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯನವರು ಬಡವರ ಮೇಲೆ ಜನ ಸಾಮಾನ್ಯರ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿದೆ. ರಾಜ್ಯದ ಹಣಕಾಸಿನ ಪರಿಸ್ಥಿತಿ ಬಗ್ಗೆ ಸಿದ್ದರಾಮಯ್ಯ ಶ್ವೇತ ಪತ್ರವನ್ನು ಹೊರಡಿಸಬೇಕು ಎಂದು ಒತ್ತಾಯಿಸಿದರು.