ಬಾಗಲಕೋಟೆ : ಇತ್ತೀಚೆಗೆ ಗಂಡು ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ ಎಂಬ ಕೂಗು ಹೆಚ್ಚಾಗುತ್ತಿದೆ. ಆದರೆ ಇದನ್ನೇ ಬಂಡವಾಳವಾಗಿ ಮಾಡಿಕೊಂಡ ಮ್ಯಾರೇಜ್ ಬ್ರೋಕರ್ ತಂಡ ಅಮಾಯಕ ಯುವಕರಿಗೆ ಮದುವೆ ಮಾಡಿಸುವುದಾಗಿ ಹೇಳಿ ಲಕ್ಷ-ಲಕ್ಷ ರೂ ಪಂಗನಾಮ ಹಾಕಿರೋ ಪ್ರಕರಣ ಬೆಳಕಿಗೆ ಬಂದಿದೆ.
ಹೌದು ಕಳೆದ 2023ರಲ್ಲಿ ಕುನಾಳ ಗ್ರಾಮದ ಮ್ಯಾರೇಜ್ ಬ್ರೋಕರ್ ಸತ್ಯಪ್ಪ ಎಂಬಾತ ಮುಧೋಳ ನಗರದ ಸೋಮಶೇಖರ ಎಂಬಾತನಿಗೆ ಮದುವೆ ಮಾಡಿಸುತ್ತೇನೆ ಎಂದು 4 ಲಕ್ಷಕ್ಕೆ ಒಪ್ಪಂದ ಮಾಡಿಕೊಂಡಿದ್ದ. ಒಪ್ಪಂದದ ಪ್ರಕಾರ ಶಿವಮೊಗ್ಗದ ಮಂಜುಳಾ ಎಂಬ ಯುವತಿ ಜೊತೆ ಸೊಮಶೇಖರನ ಮದುವೆ ಆಗುತ್ತೆ. ಕೊಟ್ಟ ಮಾತಿನಂತೆ ಸೋಮಶೇಖರ್ ಬ್ರೋಕರ್ ಸತ್ಯಪ್ಪನಿಗೆ 4 ಲಕ್ಷ ನೀಡುತ್ತಾನೆ. ಆದರೆ ಒಂದು ತಿಂಗಳೊಳಗೆ ಹೆಂಡತಿ ಮಂಜುಳಾ ಶಿವಮೊಗ್ಗಕ್ಕೆ ವಾಪಾಸ್ ಹೋಗುತ್ತಾಳೆ.
ಇದನ್ನೂ ಓದಿ : ಚೀನಾದಲ್ಲಿ ಯಾವುದೇ ವೈರಸ್ ಇಲ್ಲ : ವಿಡಿಯೋ ಮಾಡಿ ಸತ್ಯ ಬಿಚ್ಚಿಟ್ಟ ಕನ್ನಡಿಗ !
ಆಕೆಯನ್ನು ಕರೆಯಲು ಸೋಮಶೇಖರ್ ಶಿವಮೊಗ್ಗಕ್ಕೆ ಹೋದಾಗ ಸತ್ಯ ತಿಳಿದಿದ್ದು. ಆಕೆ ಈಗಾಗಲೇ ಇಬ್ಬರ ಜೊತೆ ಮದುವೆಯಾಗಿ ಅವರಿಂದ ಲಕ್ಷ-ಲಕ್ಷ ಹಣವನ್ನು ವಂಚಿಸಿರುವುದು ಬೆಳಕಿಗೆ ಬಂದಿದೆ. ಇದನ್ನು ತಿಳಿಯುತ್ತಿದ್ದಂತೆ ಪತಿ ಸೋಮಶೇಖರ್ ಮುಧೋಳ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ತನಿಖೆ ವೇಳೆ ಇನ್ನಿಬ್ಬರು ಯುವಕರಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ. ಇದೀಗ ಪೊಲೀಸ್ ಠಾಣೆಯಲ್ಲಿ ಒಟ್ಟು 7 ಜನರ ವಿರುದ್ದ ಪ್ರಕರಣ ದಾಖಲಾಗಿದೆ.