ಮಂಗಳೂರು : ನಗರದಲ್ಲಿ ಸಿನಿಮೀಯ ರೀತಿಯ ದರೋಡೆಯೊಂದು ನಡೆದಿದ್ದು. ಇಡಿ ಅಧಿಕಾರಿಗಳ ಸೋಗಿನಲ್ಲಿ ಸುಲೇಮಾನ್ ಎಂಬುವವರ ಮನೆಗೆ ಆಗಮಿಸಿದ ಆಘಂತುಕರು ಕೋಟ್ಯಾಂತರ ಹಣವನ್ನು ಎಗರಿಸಿಕೊಂಡು ಪರಾರಿಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ, ಬಂಟ್ವಾಳ ತಾಲ್ಲೂಕಿನ ಬೋಳಂತೂರು ಸಮೀಪದ ಸಾರ್ಶ ಎಂಬಲ್ಲಿ ಘಟನೆ ನಡೆದಿದ. ಉದ್ಯಮಿ ಸುಲೇಮಾನ್ ಹಾಜಿ ಎಂಬಾತ ಅನೇಕ ವರ್ಷಗಳಿಂದ ಸಿಂಗಾರಿ ಬೀಡಿ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾರೆ.ನಾಲ್ಕು ದಿನಗಳ ತಮ್ಮ ಹಿಡಿತದಲ್ಲಿದ್ದ ಕಟ್ಟಡವನ್ನು ಸುಮಾರು 3.60 ಕೋಟಿಗೆ ಮಾರಾಟ ಮಾಡಿದ್ದರು. ಬೀಡಿ ಮಜೂರಿಗೆಂದು ಕೋಟಿಯಷ್ಟು ಕ್ಯಾಶನ್ನು ಮನೆಯಲ್ಲಿ ಇಟ್ಟಿದ್ದರು. ಈ ವಿಶಯವನ್ನು ತಿಳಿದಿದ್ದ ಖದೀಮರು ದರೋಡೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ :ಜನವರಿ 13ರಿಂದ ಖೋಖೋ ವಿಶ್ವಕಪ್ ಆರಂಭ : ಭಾರತಕ್ಕೆ ಪಾಕ್ ತಂಡ ಆಗಮಿಸುವ ನಿರೀಕ್ಷೆ
ತಮಿಳುನಾಡು ಮೂಲದ ಕಾರಿನಲ್ಲಿ ಆಗಮಿಸಿದ್ದ ಖದೀಮರು. ನಿನ್ನೆ ರಾತ್ರಿ 8 ರಿಂದ 10.45ರ ಸಮಯದಲ್ಲಿ ಮನೆಗೆ ನುಗ್ಗಿದ್ದಾರೆ. ಈ ವೇಳೆ ಮನೆಯಲ್ಲಿದ್ದವರ ಎಲ್ಲಾ ಮೊಬೈಲ್ಗಳನ್ನು ವಶಕ್ಕೆ ಪಡೆದ ನಕಲಿ ಇಡಿ ಅಧಿಕಾರಿಗಳು. ಕೋಟಿಗಟ್ಟಲೆ ನಗದನ್ನು ಹೊತ್ತೊಯ್ದಿದ್ದಾರೆ . ಮನೆಯಲ್ಲಿದ್ದ ಚಿನ್ನಾಭರಣವನ್ನು ತೆಗೆದುಕೊಳ್ಳದೆ ಕೇವಲ ನಗದನ್ನು ತೆಗೆದುಕೊಂಡು ಹೋಗಿದ್ದಾರೆ. ಹೋಗುವ ವೇಳೆ ಬಿಸಿ.ರೋಡಿನಲ್ಲಿನ ಲಾಡ್ಜ್ನಲ್ಲಿದ್ದೇವೆ, ಬೆಳಿಗ್ಗೆ ವಿಚಾರಣೆಗೆ ಬನ್ನಿ ಎಂದು ಹೇಳಿದ್ದಾರೆ.ಈ ವೇಳೆ ಸುಲೇಮಾನ್ ಮತ್ತು ಅವರ ಮಗ ನಕಲಿ ಇಡಿ ಅಧಿಕಾರಿಗಳನ್ನು ಹಿಂಬಾಲಿಸಿದ್ದಾರೆ. ಆದರೆ ಕಣ್ಣು ಮರೆಸಿ ನಾಪತ್ತೆಯಾಗಿದ್ದಾರೆ.
ಸುಲೇಮಾನ್ ದಕ್ಷಿಣ ಕನ್ನಡದ ಅತ್ಯಂತ ಶ್ರೀಮಂತ ಉದ್ಯಮಿಯಾಗಿದ್ದು. ಬೋಳಂತೂರಿನಲ್ಲಿ 1 ಸಾವಿರ ಎಕರೆ ತೋಟ ಮತ್ತು ಚಿಕ್ಕಮಗಳೂರಿನಲ್ಲಿ ಎಸ್ಟೆಟ್ ಹೊಂದಿದ್ದಾರೆ. ಆದರೆ ಅಚ್ಚರಿಯ ರೀತಿಯಲ್ಲಿ ಕೋಟ್ಯಾಂತರ ರೂಪಾಯಿ ದರೋಡೆಯಾಗಿದ್ದರು ಕೂಡ ಕೇವಲ 30 ಲಕ್ಷ ಕಳುವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.