ಹಾಸನ: ಡಾಲಿ ಧನಂಜಯ್ ಅವರ ವಿವಾಹ ನಿಶ್ಚಯವಾಗಿದ್ದು. ಫೆಬ್ರವರಿ 16ರಂದು ಮೈಸೂರನಲ್ಲಿ ನಡೆಯಲಿದೆ. ಇದರ ನಡುವೆ ಹುಟ್ಟೂರಿನ ಸರ್ಕಾರಿ ಶಾಲೆಯನ್ನು ಡಾಲಿ ಧನಂಜಯ್ ಅಭಿವೃದ್ದಿ ಮಾಡಿಸಿದ್ದು. ಶಾಲೆಗೆ ಹೊಸ ಮೂಲ ಸೌಕರ್ಯವನ್ನು ಕಲ್ಪಿಸಿದ್ದಾರೆ.
ಹೌದು .. ಡಾಲಿ ಧನಂಜಯ್ ಅವರು ತಮ್ಮ ಸ್ವಗ್ರಾಮವಾದ ಕಾಳೇನಹಟ್ಟಿ ಗ್ರಾಮದ ಶಾಲೆಯನ್ನು ಅಭಿವೃದ್ದಿ ಮಾಡಿಸಿದ್ದಾರೆ. ಶಾಲಾ ಶಿಕ್ಷಕರ ಕೋರಿಕೆಯ ಮೇರೆಗೆ ಧನಂಜಯ್ ಲಕ್ಷಾಂತರ ರೂಪಾಯಿ ಹಣವನ್ನು ಖರ್ಚು ಮಾಡಿ ಶಾಲೆ ಅಭಿವೃದ್ದಿಗೆ ಚಾಲನೆ ನೀಡಿದ್ದಾರೆ. ಶೌಚಾಲಯ, ಪೇಂಟಿಂಗ್, ಟೈಲ್ಸ್, ಮೇಲ್ಚಾವಣಿ ಸೇರಿದಂತೆ ಹಲವು ಕೆಲಸಗಳಿಗೆ ಚಾಲನೆ ನೀಡಿದ್ದಾರೆ.
ಇದನ್ನೂ ಓದಿ : ಓವರ್ಟೇಕ್ ಮಾಡುವ ಬರದಲ್ಲಿ ಅಪಘಾತ : ಕಸದ ಲಾರಿ ಹರಿದು ಇಬ್ಬರು ಮಹಿಳೆಯರ ಸಾ*ವು !
ಈ ಶಾಲೆಯಲ್ಲಿ ಸುಮಾರು 86 ಮಕ್ಕಳು ವಿಧ್ಯಾಬ್ಯಾಸ ಮಾಡುತ್ತಿದ್ದು. ಬಹುತೇಕ ಎಲ್ಲಾ ಬಡ ವಿಧ್ಯಾರ್ಥಿಗಳೇ ಶಾಲೆಯಲ್ಲಿ ವಿಧ್ಯಾಬ್ಯಾಸ ಮಾಡುತ್ತಿದ್ದಾರೆ. ಡಾಲಿ ಧನಂಜಯ ಅವರ ಈ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.