ಬಳ್ಳಾರಿ : ಪ್ರೀತಿಸಿದ ಯುವತಿ ಕೈಕೊಟ್ಟಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ಪ್ರೇಯಸಿಯ ಕುಟುಂಬದವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದು. ನಂತರ ತಾನೂ ರೈಲಿಗೆ ತಲೆ ಕೊಟ್ಟು ಸಾವನ್ನಪ್ಪಿದ್ದಾನೆ.
ಹೊಸಪೇಟೆ ತಾಲೂಕಿನ ಪಿ.ಕೆ.ಹಳ್ಳಿ ಮೂಲದ ನವೀನಕುಮಾರ್ ಮತ್ತು ಯುವತಿ ಕೀರ್ತಿ ನಡುವೆ ಹಲವು ವರ್ಷಗಳಿಂದ ಪ್ರೇಮಾಂಕುರವಾಗಿತ್ತು. ನವೀನ್ ಕುಮಾರ್ ಬಾಳೆಹಣ್ಣು ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದನು. ಯುವತಿಯೂ ಕೂಡ ಎಂಎಸ್ಸಿ ವ್ಯಾಸಂಗ ಮಾಡುತ್ತಿದ್ದಳು. ಓದುವ ಹಿನ್ನಲೆ ಪ್ರೀತಿ ಪ್ರೇಮಕ್ಕೆ ಬ್ರೇಕ್ ಹಾಕೋದಾಗಿ ಕೀರ್ತಿ ಹೇಳಿದ್ದಳು.
ಇದನ್ನೂ ಓದಿ :ದಲಿತ ಸಮುದಾಯದ ಯಜಮಾನನಿಂದ ದಲಿತ ಕುಟುಂಬಕ್ಕೆ ಬಹಿಷ್ಕಾರದ ಬರೆ !
ಇದರಿಂದ ಅಸಮಾಧಾನಗೊಂಡಿದ್ದ ಭಗ್ನ ಪ್ರೇಮಿ , ನಿನ್ನೆ ಸಂಜೆ ಸಂಡೂರಿನ ಚರ್ಚ್ ಶಾಲೆ ರಸ್ತೆಯಲ್ಲಿರುವ ಯುವತಿಯ ಮನೆಗೆ ಆಗಮಿಸಿದ್ದಾನೆ. ಮನೆಗೆ ಮುಂದೆ ಜಗಳ ನಡೆಸಿದ್ದು. ಈ ವೇಳೆ ಯುವತಿಯ ತಾಯಿ ಕಮಲಾಕ್ಷಿ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಹಲ್ಲೆಯಿದ್ದ ಯುವತಿ ಅಣ್ಣ ಕಾರ್ತಿಕ್ ಜಗಳ ಬಿಡಿಸಲು ಬಂದಿದ್ದು. ಈ ವೇಳೆ ಆತನ ಮೇಲೂ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ.
ಗಲಾಟೆ ಜೋರಾಗುತ್ತಿದ್ದ ಯುವಕ ಸ್ಥಳದಿಂದ ಪರಾರಿಯಾಗಿದ್ದನು. ಹಲ್ಲೆ ಸಂಬಂಧ ಯುವತಿಯ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ಯುವಕನಿಗಾಗಿ ಹುಡುಕಾಟ ನಡೆಸಿದ್ದರು. ಯುವಕನು ಕಾರನ್ನು ಪತ್ತೆ ಹಚ್ಚಿದ್ದ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದರು. ‘
ಆದರೆ ಇಂದು ಬೆಳಗಿನ ಜಾವ ಆರೋಪಿ ಯುವಕ ಯಶವಂತಪುರ ನಗರ ಬಳಿಯ ರೈಲ್ವೆ ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ಸಂಬಂಧ ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.