Monday, January 6, 2025

ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ ಬಾಲಕಿ ಸೆಂಟ್ರಿಂಗ್​ ಮರ ಬಿದ್ದು ಸಾವು !

ಬೆಂಗಳೂರು : ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ ಬಾಲಕಿಯ ಮೇಲೆ ಸೆಂಟ್ರಿಂಗ್​ಗೆ ಬಳಸುವ ಮರ ಬಿದ್ದು ಸಾವನ್ನಪ್ಪಿರುವ ಘಟನೆ ವಿವಿ.ಪುರಂ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಬಾಲಕಿಯನ್ನು ತೇಜಸ್ವಿನಿ ಎಂದು ಗುರುತಿಸಲಾಗಿದೆ.

ಶವಿವಾರ ಇದ್ದ ಕಾರಣ ಶಾಲೆಗೆ ತೆರಳಿದ್ದ ಬಾಲಕಿ ತೇಜಸ್ವಿನಿ ಶಾಲೆಯನ್ನು ಮುಗಿಸಿ, ಡ್ಯಾನ್ಸ್​ ಕ್ಲಾಸ್​ ಮುಗಿಸಿಕೊಂಡು ಮನೆಗೆ  ಹೋಗುತ್ತಿದ್ದಳು. ಈ ವೇಳೆ ವಿ.ವಿ.ಪುರಂ ಮೆಟ್ರೋ ನಿಲ್ದಾಣದ ಬಳಿಯಲ್ಲಿ ಕನ್ಸ್ಟ್ರಕ್ಷನ್​ ನಡೆಯುತ್ತಿದ್ದ ಬಿಲ್ಡಿಂಗ್​ನ ನಾಲ್ಕನೇ ಅಂತಸ್ತಿನಿಂದ ಸಾರ್ವ ಮರ ಬಿದ್ದು ಬಾಲಕಿ ಸಾವನ್ನಪ್ಪಿದ್ದಾಳೆ.

ಇದನ್ನೂ ಓದಿ : ಬಸ್​ ಟಿಕೆಟ್​ ದರ ಹೆಚ್ಚಳ : ಎಷ್ಟು, ಏನು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ !

ಮೇಲಿಂದ ರಭಸವಾಗಿ ಮರ ಬಿದ್ದ ಕಾರಣದಿಂದ ಬಾಲಕಿ ಸ್ಥಳದಲ್ಲೆ ಸಾವನ್ನಪ್ಪಿದ್ದು. ಘಟನೆ ಸಂಬಂಧ ವಿ.ವಿ ಪುರಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES