Monday, January 6, 2025

ತಂದೆಯ ಕೊಲೆ ಮಾಡಿ , ಹೃದಯಾಘಾತದ ನಾಟಕವಾಡಿದ ಖತರ್ನಾಕ್​ ಮಗ !

ಹಾಸನ : ಸ್ವಂತ ಮಗನೆ ತಂದೆಯ ಕೊಲೆ ಮಾಡಿರುವ ಘಟನೆ ಹಾಸನದಲ್ಲಿ ನಡೆದಿದ್ದು. ಕೊಲೆಯಾದ ನಂತರ ಪಾಪಿ ಪುತ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ನಾಟಕವಾಡಿದ್ದಾನೆ. ಮೃತ ವ್ಯಕ್ತಿಯನ್ನು 58 ವರ್ಷದ ಶಶಿಧರ್​ ಎಂದು ಗುರುತಿಸಲಾಗಿದೆ.

ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಅರೇಹಳ್ಳಿ ಹೋಬಳಿ, ಲಿಂಗಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು. ಕಂಠಪೂರ್ತಿ ಕುಡಿದು ಬಂದು ಜಗಳ ಶುರು ಮಾಡಿದ್ದ ಮಗ ದಿನೇಶ್​ ತನ್ನ ತಂದೆ ಶಶಿಧರ್​ಗೆ ಕಾಲಿನಿಂದ ಒದ್ದಿದ್ದನು. ಈ ವೇಳೆ ಸ್ಥಳದಲ್ಲೆ ಕುಸಿದು ಬಿದ್ದ ತಂದೆ ಸಾವನ್ನಪ್ಪಿದ್ದನು.

ಇದನ್ನೂ ಓದಿ : ಕೈ ಕೊಟ್ಟ ಪ್ರೇಯಸಿ : ಯುವತಿಯ ಮನೆಯರ ಮೇಲೆ ಹಲ್ಲೆ ನಡೆಸಿ ರೈಲಿಗೆ ತಲೆ ಕೊಟ್ಟ ಯುವಕ !

ನಂತರ ತಂದೆಗೆ ಹೃದಯಾಘಾತವಾಗಿದೆ ಎಂದಿದ್ದ ದಿನೇಶ್​ ಅರೇಹಳ್ಳಿ ಆಸ್ಪತ್ರೆಗೆ ದಾಖಲು ಮಾಡಿದ್ದನು. ಈ ವೇಳೆ ವೈದ್ಯರು ಶಶಿಧರ್ ಮೃತಪಟ್ಟಿರುವುದನ್ನು ಧೃಡಪಡಿಸಿದ್ದರು. ಪ್ರತಿನಿತ್ಯ ಕುಡಿದು ಬಂದು ಎಲ್ಲರ ಜೊತೆ ಜಗಳವಾಡುತ್ತಿದ್ದ ದಿನೇಶ್​ ವಿರುದ್ದ ಗ್ರಾಮಸ್ಥರು ಆರೋಪಿಸಿದ್ದರು.

ಮಗನ ವಿರುದ್ದ ತಾಯಿ ಅರೇಹಳ್ಳಿ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ದಿನೇಶ್​ನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES