ಮೈಸೂರು : ಕಳ್ಳತನ ಮಾಡಲು ಮನೆಗೆ ನುಗ್ಗಿದ್ದ ಕಳ್ಳನೊಬ್ಬ ಮನೆಯಲ್ಲಿದ್ದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ ಸಿಕ್ಕಿ ಬಿದ್ದಿದ್ದಾನೆ. ಈ ವಿಷಯವನ್ನು ತಿಳಿದ ಗ್ರಾಮಸ್ಥರು ಆರೋಪಿಯನ್ನು ಹುಡುಕಿ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ.
ಮೈಸೂರಿನ, ನಂಜನಗೂಡು ತಾಲೂಕಿನ ಬೊಕ್ಕಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಅದೇ ಗ್ರಾಮದ ಹರ್ಷ ಎಂಬಾತ ಕಳ್ಳತನ ಮಾಡಲು ಯತ್ನಿಸಿದ್ದಾನೆ. ಮಹಿಳೆ ಮಂಜುಳಾ ಎಂಬಾಕೆಯ ಮನೆಯಲ್ಲಿ ಕಳ್ಳತನ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾನೆ ಎಂದು ತಿಳಿದು ಬಂದಿದೆ.
ಬೊಕ್ಕನಹಳ್ಳಿ ಗ್ರಾಮದ ಮಂಜುಳಾ ನಾಲ್ಕು ತಿಂಗಳ ಹಿಂದೆ ತಮ್ಮ ಗಂಡನನ್ನು ಕಳೆದುಕೊಂಡಿದ್ದರು. ಜೀವನೋಪಾಯಕ್ಕಾಗಿ ಮೈಸೂರಿನ ಬಿಸಿಎಂ ಹಾಸ್ಟೆಲ್ನಲ್ಲಿ ಅಡುಗೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಮಹಿಳೆ. ತಮ್ಮ ಹೆಸರಿನಲ್ಲಿದ್ದ ಒಂದುವರೆ ಎಕರೆ ಜಮೀನನ್ನು ಭೋಗ್ಯಕ್ಕೆ ನೀಡಿದ್ದರು. ಇದರ ಪರಿಣಾಮವಾಗಿ 3 ಲಕ್ಷ ನಗದನ್ನು ತಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದರು.
ಇದನ್ನೂ ಓದಿ :ಇಸಿಜಿ ಚುಚ್ಚುಮದ್ದು ಪಡೆದ ಮಗು ಸಾ*ವು : ವೈದ್ಯರ ಎಡವಟ್ಟು ಎಂದ ಕುಟುಂಬಸ್ಥರು !
ಈ ವಿಶಯವನ್ನು ತಿಳಿದಿದ್ದ ಅದೇ ಗ್ರಾಮದ ಹರ್ಷ ಎಂಬಾತ ಜನವರಿ 01ರಂದು ಮಧ್ಯರಾತ್ರಿ ಮನೆಗೆ ನುಗ್ಗಿದ್ದಾನೆ. ಈ ವೇಳೆ ಶಬ್ದವಾದ ಹಿನ್ನಲೆ ಎಚ್ಚರಗೊಂಡ ಮಂಜುಳಾ ಪರಿಶೀಲಿಸಿದ್ದಾರೆ. ಈ ವೇಳೆ ತನ್ನ ಅತ್ತೆ ಮಲಗಿದ್ದ ಮಂಚದ ಕೆಳಗೆ ಹರ್ಷ ಅವಿತುಕೊಂಡಿರುವುದು ಪತ್ತೆಯಾಗಿದೆ.
ಇದನ್ನು ತಿಳಿದಿ ಮಂಜುಳಾ ಹರ್ಷನನ್ನು ಹಿಡಿದಿದ್ದಾರೆ. ಈ ವೇಳೆ ಮಹಿಳೆಯ ಅಂಗಾಂಗಳನ್ನು ಮುಟ್ಟಿ ಮಹಿಳೆಯ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಈ ವಿಷಯವನ್ನು ಮಹಿಳೆ ಗ್ರಾಮಸ್ಥರಿಗೆ ತಿಳಿಸಿದ್ದರು. ಈ ವಿಶಯವನ್ನು ತಿಳಿದ ಗ್ರಾಮಸ್ಥರು ಹರ್ಷನನ್ನು ಪತ್ತೆ ಹಚ್ಚಿ ಕಂಬಕ್ಕೆ ಕಟ್ಟಿ ಧರ್ಮದೇಟು ನೀಡಿದ್ದಾರೆ. ಈ ವೇಳೆ ಕಳ್ಳತನ ಮಾಡಲು ನುಗ್ಗಿದ್ದಾಗಿ ಹರ್ಷ ಒಪ್ಪಿಕೊಂಡಿದ್ದಾನೆ.
ಗ್ರಾಮಸ್ಥರು ಹರ್ಷನನ್ನು ನಂಜನಗೂಡು ಗ್ರಾಮಂತರ ಪೊಲೀಸ್ ಠಾಣೆಗೆ ಒಪ್ಪಿಸಿದ್ದು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.