ಬೆಂಗಳೂರು : ಟ್ಯೂಷನ್ಗೆ ಬರುತ್ತಿದ್ದ 10ನೇ ತರಗತಿ ವಿದ್ಯಾರ್ಥಿನಿಯನ್ನು ಶಿಕ್ಷಕನೋರ್ವ ಕಿಡ್ನಾಪ್ ಮಾಡಿದ್ದು. ಪ್ರೀತಿ-ಪ್ರೇಮದ ಬಲೆಯಲ್ಲಿ ಬೀಳಿಸಿಕೊಂಡು ಈ ರೀತಿ ಮಾಡಿದ್ದಾನೆ. ಕೃತ್ಯವೆಸೆಗಿದ ಶಿಕ್ಷಕನನ್ನು ಅಭಿಷೇಕ್ ಎಂದು ಗುರುತಿಸಲಾಗಿದೆ.
ಕಳೆದ ನವೆಂಬರ್ 23ರಂದು ಎಂದಿನಂತೆ ಬಾಲಕಿ ಟ್ಯೂಷನ್ಗೆ ಎಂದು ಆರೋಪಿಯ ಮನೆಗೆ ಬಂದಿದ್ದಳು. ಆದರೆ ಟ್ಯೂಷನ್ ಸಮಯ ಮುಗಿದರೂ ಕೂಡ ಬಾಲಕಿ ಮನೆಗೆ ಮರಳಿರಲಿಲ್ಲ. ನಂತರ ಟ್ಯೂಷನ್ ಸೆಂಟರ್ ಬಳಿಗೆ ಹೋಗಿ ವಿಚಾರಿಸಿದಾಗ ಟ್ಯೂಷನ್ ಟೀಚರ್ ಅಭಿಷೇಕ್ ಬಾಲಕಿಯನ್ನು ಕರೆದೊಯ್ದಿರುವುದು ಪತ್ತೆಯಾಗಿದೆ.
ಇದನ್ನೂ ಓದಿ:ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಕಳ್ಳ : ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು !
ಬಾಲಕಿಯನ್ನು ಕರೆದೂಯ್ಯುವ ವೇಳೆ ಆರೋಪಿ ತನ್ನ ಮೊಬೈಲ್ ಪೋನನ್ನು ಮನೆಯ ರೂಂನಲ್ಲೆ ಬಿಟ್ಟು ಹೋಗಿದ್ದಾನೆ. ಬಾಲಕಿಯ ತಂದೆ ಜೆ,ಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು. ಕಳೆದ ನಲವತ್ತು ದಿನಗಳಿಂದ ಆರೋಪಿ ಸಣ್ಣ ಸುಳಿವು ಸಿಗದಂತೆ ಆಪ್ರಾಪ್ತೆ ಜೊತೆ ತಲೆಮರಿಸಿಕೊಂಡಿದ್ದಾನೆ ಹಾಗೂ ಆರೋಪಿ ಯಾವುದೇ ಆನ್ಲೈನ್ ಪೇಮೆಂಟ್ನ್ನು ಬಳಸುತ್ತಿಲ್ಲ ಎಂದು ತಿಳಿದು ಬಂದಿದೆ.
ಆರೋಪಿಗಾಗಿ ಪೊಲೀಸರು ಬೆಂಗಳೂರು ರಾಮನಗರ ಕನಕಪುರ ಸೇರಿ ಹಲವು ಕಡೆ ಹುಡುಕಾಟ ನಡೆಸಿದ್ದು. ಆರೋಪಿಯ ಬಗ್ಗೆ ಸುಳಿವು ನೀಡಿದವರಿಗೆ ಬಹುಮಾನ ನೀಡುವುದಾಗಿ ಪೊಲೀಸ್ ಪ್ರಕಟಣೆ ಹೊರಡಿಸಲಾಗಿದೆ. ಮತ್ತು ಆರೋಪಿ ಪತ್ತೆಗಾಗಿ ಲುಕ್ಔಟ್ ನೋಟಿಸ್ನ್ನು ಹೊರಡಿಸಲಾಗಿದೆ ಎಂದು ಮಾಹಿತಿ ದೊರೆತಿದೆ.