ಚಿಕ್ಕೋಡಿ : ಕಳೆದ 10 ದಿನಗಳ ಹಿಂದೆಗಳ ಹಿಂದೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕೂಡ ಗ್ರಾಮದಲ್ಲಿ ಸುವರ್ಣ ಮಾಂತಯ್ಯ ಎಂಬ ತುಂಬು ಗರ್ಭಿಣಿ ಮಹಿಳೆಯನ್ನು ದುಷ್ಕರ್ಮಿಗಳು ಮನೆಯಲ್ಲಿಯೆ ಇರಿದು ಕೊಲೆ ಮಾಡಿದ್ದರು. ಇದರ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿತ್ತು. ಆದರೆ ಈ ಪ್ರಕರಣಕ್ಕೆ ಇದೀಗ ಹೊಸ ತಿರುವು ದೊರೆತಿದ್ದು. ಸ್ವಂತ ಮಾವನೇ ಸೊಸೆಯನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಕೊಲೆ ಆರೋಪಿಯನ್ನು ಅಪ್ಪಯ್ಯ ರಾಚಯ್ಯ ಮಠಪತಿ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ :ಚೀನಾದಲ್ಲಿ ಹೊಸ ವೈರಸ್ ಉಗಮ : ಜಗತ್ತಿಗೆ ಆವರಿಸಿದ ಲಾಕ್ಡೌನ್ ಭಯ !
ನಾಲ್ಕು ಮಕ್ಕಳ ತಾಯಿಯಾಗಿದ್ದ ಮಹಿಳೆ ಐದನೇ ಮಗುವಿನ ನಿರೀಕ್ಷೆಯಲ್ಲಿದ್ದರು. ಮಹಿಳೆಯ ಹೆರಿಗೆ ದಿನಾಂಕವು ನಿಗಧಿಯಾಗಿತ್ತು. ಆದರೆ ಮಹಿಳೆ ತನ್ನ ಮಾವನಿಗೆ ಸುಮಾರು 50 ಸಾವಿರ ಹಣವನ್ನು ಕೊಟ್ಟಿದ್ದಳು, ಹೆರಿಗೆ ದಿನಾಂಕ ಹತ್ತಿರವಾಗುವತ್ತಿದ್ದಾಗ ಮಹಿಳೆ ಕೊಟ್ಟ ಹಣವನ್ನು ವಾಪಾಸ್ ಕೇಳಿದ್ದಳು.
ಇದರಿಂದ ಕುಪಿತಗೊಂಡಿದ್ದ ಪಾಪಿ ಮಾವ ತುಂಬು ಗರ್ಭಿಣಿ ಎಂದು ನೋಡದೆ ಸೊಸೆಗೆ ಮಾರಾಕಾಸ್ತ್ರಗಳಿಂದ ಇರಿದು ಕೊಲೆ ಮಾಡಿದ್ದನು. ಕೊಲೆ ಮಾಡಿದ್ದು ಮಾತ್ರವಲ್ಲದೆ ಮಹಿಳೆಯ ಮೈಮೇಲಿನ ಒಡವೆಗಳನ್ನು ದೋಚಿ ಸ್ಥಳದಿಂದ ಪರಾರಿಯಾಗಿದ್ದನು. ಇದರ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು ಆರೋಪಿ ಅಪ್ಪಯ್ಯ ರಾಚಯ್ಯ ಮಠಪತಿಯ ಹೆಡೆಮುರಿ ಕಟ್ಟಿದ್ದು. ಕೊಲೆ ಆರೊಪಿಯನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.