ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಂಶೋದನೆಯ ವರದಿಯ ಪ್ರಕಾರ ದೇಶದಲ್ಲಿ ಕಡು ಬಡತನದ ಪ್ರಮಾಣ ಅತ್ಯಂತ ಕನಿಷ್ಟಮಟ್ಟಕ್ಕೆ ಇಳಿದಿದೆ ಎಂದು ತಿಳಿದು ಬಂದಿದೆ. ಒಟ್ಟಾರೇ, ಭಾರತದಲ್ಲಿ ಕಡು ಬಡತನ ಅತ್ಯಂಕ ಕನಿಷ್ಠ ಮಟ್ಟದಲ್ಲಿರುವುದರೊಂದಿಗೆ ಬಡತನ ಪ್ರಮಾಣ ಈಗ ಶೇ. 4 ರಿಂದ ಶೇ. 4.5 ರಷ್ಟಿದೆ.
ಇದನ್ನೂ ಓದಿ : ವೈದ್ಯರು ಕ್ಯಾನ್ಸರ್ ರೋಗಿಗಳಿಗೆ ವಿಶೇಷ ಕಾಳಜಿಯಿಂದ ಚಿಕಿತ್ಸೆ ನೀಡಬೇಕು : ದ್ರೌಪದಿ ಮುರ್ಮು
ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿನ ಬಡತನದ ಪ್ರಮಾಣದಲ್ಲಿ ಅತ್ಯಂತ ಗಮನಾರ್ಹ ಸುಧಾರಣೆ ಆಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅದೇ ರೀತಿ ಗ್ರಾಮೀಣ ಪ್ರದೇಶದಲ್ಲಿನ ಬಡತನ ಪ್ರಮಾಣ 2024ರ ಆರ್ಥಿಕ ವರ್ಷದಲ್ಲಿ ಶೇ. 4.09 ರಷ್ಟು ಕಡಿಮೆಯಾಗಿದೆ. ಇದು 2023ರ ಆರ್ಥಿಕ ವರ್ಷದಲ್ಲಿ ಶೇ. 4.6 ಮತ್ತು 2012ರ ಆರ್ಥಿಕ ವರ್ಷದಲ್ಲಿ ಶೇ. 13. 7 ರಷ್ಟಿತ್ತು.