Sunday, January 5, 2025

ನೀರು ಶುದ್ಧೀಕರಣ ಘಟಕದಲ್ಲಿ‌ ಸತ್ತುಬಿದ್ದ ನಾಯಿ : 17 ಗ್ರಾಮದ ಜನರಿಗೆ ವಾಂತಿ ಭೇದಿಯ ಆತಂಕ !

ರಾಯಚೂರು : ಕುಡಿಯುವ ನೀರಿನ ಶುದ್ಧೀಕರಣ ಘಟಕದಲ್ಲಿ‌ ನಾಯಿಯೊಂದು ಸತ್ತುಬಿದ್ದಿ ಘಟನೆ ರಾಯಚೂರಿನಲ್ಲಿ ನಡೆದಿದ್ದು. ಕಳೆದ 3 ದಿನಗಳಿಂದ ಇದೇ ನೀರನ್ನು ಕುಡಿದಿರುವ ಗ್ರಾಮಸ್ಥರಿಗೆ ಇದೀಗ ವಾಂತಿ ಭೇದಿಯ ಆತಂಕ ಶುರುವಾಗಿದೆ.

ರಾಯಚೂರು ತಾಲೂಕಿನ ಬಿಚ್ಚಾಲಿ ಗ್ರಾಮದಲ್ಲಿ ಘಟನೆ ನಡೆದಿದ್ದು. ನೀರಿನ ಶುದ್ದೀಕರಣ ಘಟಕದಲ್ಲಿ ನಾಯಿಯೊಂದು ಸತ್ತು ಬಿದ್ದಿದೆ. ಇದೇ ನೀರಿನ ಘಟಕದಿಂದ ಸುಮಾರು 17 ಗ್ರಾಮಗಳಿಗೆ ಶುದ್ದ ಕುಡಿಯುವ ನೀರು ಸರಬಾರಾಜು ಆಗುತ್ತಿದ್ದು. ಈ ನೀರನ್ನು ಕುಡಿಸ ಜನರಲ್ಲಿ ವಾಂತಿ-ಭೇದಿಯ ಅನುಭವವಾಗಿದೆ ಎಂದು ತಿಳಿದು ಬಂದಿದೆ.

ನೀರಿನ ಘಟಕದಲ್ಲಿ ನಾಯಿ ಸತ್ತು ಬಿದ್ದಿರುವ ವಿಶಯ ತಿಳಿಯುತ್ತಿದ್ದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿಗಖಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು. ಘಟಕ ನಿರ್ವಹಣೆಗೆ ಲಕ್ಷಾಂತರ ರೂಪಾಯಿ ಅನುದಾನ ಬಂದರೂ ಕೂಡ ಬೇಜವಬ್ದಾರಿ ವಹಿಸಿರುವ ಸಿಬ್ಬಂದಿಗಳ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ನಾಯಿಯನ್ನು ತೆರವುಗೊಳಿಸಿ ನೀರಿನ ಟ್ಯಾಂಕ್​ ಸ್ವಚ್ಚಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಕೊಟ್ಟ ಹಣವನ್ನು ವಾಪಾಸ್​ ಕೇಳಿದ ಗರ್ಭಿಣಿ ಸೊಸೆಯನ್ನು ಕೊಲೆ ಮಾಡಿದ ಪಾಪಿ ಮಾವ !

ಪವರ್​ ವರಿದಿಗೆ ಎಚ್ಚೆತ್ತ ಅಧಿಕಾರಿಗಳು !

ಪವರ್ ಟಿವಿಯಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ RWS ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು. ಅಧಿಕಾರಿ ಜೆ.ಇ ಮಹೇಶ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿರುವ ಆರ್​ಡಬ್ಲೂಎಸ್ ಇಲಾಖೆಯ ಅಧಿಕಾರಿಗಳು ನಾಯಿ ಬಿದ್ದಿರುವ ವಿಷಯ ಗಮನಕ್ಕೆ ಬಂದಿದೆ. ಆದ್ದರಿಂದ ನೀರಿನ ಘಟಕವನ್ನು ಸ್ವಚ್ಚತೆ ಮಾಡಿ. ಆದಷ್ಟು ಬೇಗ ನೀರು ಕೊಡುವ ಭರವಸೆ ನೀಡಿದ್ದಾರೆ. ಅದರ ಜೊತೆಗೆ ತಿಂಗಳಿಗೆ 3 ಲಕ್ಷ ವರ್ಷದ ರೀತಿಯಲ್ಲಿ ಪ್ರತಿ ವರ್ಷ ನೀರಿನ ಘಟಕದ ನಿರ್ವಹಣೆಗೆ ಸುಮಾರು 40 ಲಕ್ಷ ಹಣ ನೀಡಲಾಗುತ್ತಿದೆ. ಗುತ್ತಿಗೆ ದಾರರು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ಗುತ್ತಿಗೆ ದಾರರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

RELATED ARTICLES

Related Articles

TRENDING ARTICLES