ಬೆಳಗಾವಿ : ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರೂ ಈ ಸಮಾರಂಭದಲ್ಲಿ ಭಾಗವಹಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ನೂತನ ಕ್ಯಾನ್ಸರ್ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಿದರು.
ಕ್ಯಾನ್ಸರ್ ಆಸ್ಪತ್ರೆಯನ್ನು ಉದ್ಘಾಟನೆಎ ಮಾಡಿ ಮಾತನಾಡಿದ ದ್ರೌಪದಿ ಮುರ್ಮು ‘ ಕ್ಯಾನ್ಸರ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ಸಿಗಲಿ. ಕ್ಯಾನ್ಸರ್ ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆ ಸಿಗಬೇಕಿದೆ. ಜಗತ್ತಿನಲ್ಲಿ ಸುಮಾರು 20 ಮಿಲಿಯನ್ ಕ್ಯಾನ್ಸರ್ ಕೇಸ್ಗಳು ಪತ್ತೆಯಾಗುತ್ತಿವೆ. ಸುಮಾರು 9 ಮಿಲಿಯನ್ ಜನರು ಈ ರೋಗಕ್ಕೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ.
ಕ್ಯಾನ್ಸರ್ ರೋಗ ಕೇವಲ ರೋಗಿಗೆ ಮಾತ್ರ ಸಮಸ್ಯೆ ತರಲ್ಲ. ಅದು ಆತನ ಕುಟುಂಬಕ್ಕೂ ಸಂಕಷ್ಟ ತರುತ್ತದೆ. ಅದಕ್ಕೆ ಪ್ರತಿಯೊಬ್ಬ ವೈದ್ಯರು ಕ್ಯಾನ್ಸರ್ ರೋಗಿಗೆ ವಿಶೇಷ ಕಾಳಜಿಯಿಂದ ಚಿಕಿತ್ಸೆ ನೀಡಬೇಕು. ಭಾರತ ಸರ್ಕಾರ ಕೂಡ ಕ್ಯಾನ್ಸರ್ ಚಿಕಿತ್ಸೆಯನ್ನು ಗುಣಮಟ್ಟಗೊಳಿಸಲು ಕ್ರಮವಹಿಸಬೇಕು. ಇದಕ್ಕಾಗಿ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ.
ಇದನ್ನೂ ಓದಿ : ಮೂಡಾ ಇರುವವರೆಗೂ ಸಿಎಂ ಹೆಸರು ಶಾಶ್ವತವಾಗಿರುತ್ತದೆ : ಪ್ರತಾಪ್ ಸಿಂಹ
ಆಯುಶ್ಮಾನ್ ಭಾರತ ಯೋಜನೆಗಳು ಜನಮುಖಿ ಯೋಜನೆಗಳಾಗಿವೆ. ಸಮಾಜದಲ್ಲಿ ಕ್ಯಾನ್ಸರ್ ರೋಗವನ್ನು ತಡೆಯುವ ಕುರಿತು ಜನಜಾಗೃತಿ ಅವಶ್ಯಕತೆ ಇದೆ. ಇಂತಹ ಮಾರಕ ರೋಗಗಳನ್ನು ಆರಂಭದಲ್ಲಿಯೆ ಪತ್ತೆ ಮಾಡಿ ಚಿಕಿತ್ಸೆ ಕೊಡಿಸುವ ಅವಶ್ಯಕತೆ ಇದೆ. ಕೆಎಲ್ಇ ಸಂಸ್ಥೆಯ ಕಾರ್ಯ ನನಗೆ ಸಂತೋಶ ತಂದಿದೆ. ನಿಮ್ಮಲ್ಲರಿಗೂ ನಾನು ಶುಭಾಶಯ ತಿಳಿಸುವೆ, ನಿಮ್ಮೆಲ್ಲರ ಭವಿಶ್ಯ ಉಜ್ವಲ ಆಗಲಿ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.