ಮೈಸೂರು : ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಸಿಎಂ ಸಿದ್ದರಾಮಯ್ಯರ ಹೆಸರನ್ನು ಇಡುವ ವಿಚಾರವಾಗಿ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ ‘ ಸಿಎಂ ಸಿದ್ದರಾಮಯ್ಯ ಮೂಡಾದಲ್ಲಿ ಮಾಡಿರುವ ಕೆಲಸಕ್ಕೆ, ಮೂಡಾ ಇರುವವರೆಗೂ ಸಿಎಂ ಸಿದ್ದರಾಮಯ್ಯ ಹೆಸರು ಶಾಶ್ವತವಾಗಿರುತ್ತದೆ. ಹೀಗಾಗಿ ಅವರ ಹೆಸರನ್ನು ಬೇರೆ ಕಡೆ ಇಡುವ ಅವಶ್ಯಕತೆ ಇಲ್ಲ.
ಅದಕ್ಕಿಂತೆ ಹೆಚ್ಚಾಗಿ ಸಿಎಂ ಸಿದ್ದರಾಮಯ್ಯಹೆಸರಿನಲ್ಲೇ ಮೈಸೂರಿನಲ್ಲಿ ವೃತ್ತ ಇದೆ. ಹಾಸ್ಟೆಲವೊಂದಕ್ಕೆ ಅವರ ಹೆಸರನ್ನು ಇಡಲಾಗಿದೆ. ಆದ್ದರಿಂದ ಈ ರಸ್ತೆಗೆ ಸಿದ್ದರಾಮಯ್ಯರ ಹೆಸರನ್ನು ಇಡುವ ಅವಶ್ಯಕತೆ ಇಲ್ಲ. ಸಿಎಂ ಕೂಡ ಕಾನೂನು ಪದವೀದರರು, ಅವರಿಗೆ ಕಾನೂನಿನ ಅರಿವು ಇರಬೇಕು. ಮೈಸೂರಿನ ಹಿನ್ನಲೆ ಸಿದ್ದರಾಮಯ್ಯಗೆ ಗೊತ್ತಿದೆ. ಮೈಸೂರಿನ ಮಹರಾಜರ ಋಣದಲ್ಲಿ ನಾವೆಲ್ಲಾ ಇದ್ದೇವೆ. ಮಹರಾಜರು ಕಟ್ಟಿದ ವಿವಿಯಲ್ಲೆ ಸಿದ್ದರಾಮಯ್ಯ ಪದವಿ ಪಡೆದಿದ್ದೀರ. ಮೈಸೂರಿನ ಮಹರಾಜರ ಋಣ ನಮ್ಮ ಮೇಲಿದೆ. ಈ ವಿಚಾರದಲ್ಲಿ ವೈರತ್ವ ದ್ವೇಶ ಮಾಡಬಾರದು ಎಂದು ಹೇಳಿದರು.
ಬಸ್ ದರ ಏರಿಕೆಗೆ ಕಿಡಿ ಕಾರಿದ ಪ್ರತಾಪ್ ಸಿಂಹ !
ಬಸ್ ಟಿಕೆಟ್ ದರ ಹೆಚ್ಚಳ ವಿಚಾರವಾಗಿ ಮಾತನಾಡಿದ ಪ್ರತಾಪ್ ಸಿಂಹ ‘ ಪಂಚ ಗ್ಯಾರಂಟಿ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದಿದ್ದಾರೆ. ಆದರೆ ಇವರು ಹೆಂಡತಿಗೆ 2 ಸಾವಿರ ಕೊಡಲು, ಮಧ್ಯದ ಮೇಲಿನ ದರ ಹೆಚ್ಚಳ ಮಾಡಿದ್ದಾರೆ. ಯುವನಿಧಿಯನ್ನು ಇನ್ನು ಜಾರಿ ಮಾಡೆ ಇಲ್ಲ. ಇನ್ನು ಶಕ್ತಿ ಯೋಜನೆ ಪರಿಣಾಮವಾಗಿ ಎಲ್ಲಾ ಸಾರಿಗೆ ನಿಗಮಗಳು ಮುಚ್ಚಿಕೊಳ್ಳುವ ಸ್ಥಿತಿಯಲ್ಲಿವೆ. ಈ ಸರ್ಕಾರ ಒಂದು ಕಡೆ ದರೋಡೆ ಮಾಡಿ, ಮತ್ತೊಂದು ಕಡೆ ಕೊಡುವ ನಾಟಕ ಮಾಡುತ್ತಿದೆ.
ಇದನ್ನೂ ಓದಿ : ಆಮ್ ಆದ್ಮಿ ಎಂದರೆ ಆಪತ್ತು, ಈ ಆಪತ್ತಿನಿಂದ ದೆಹಲಿಯನ್ನು ಕಾಪಾಡುತ್ತೇವೆ : ಮೋದಿ
ಈ ಸರ್ಕಾರ ಕೇವಲ ಜಾತಿ ಜಾತಿ ನಡುವೆ ತಂದು ಹಾಕುವ ಕೆಲಸ ಮಾಡುತ್ತಿದೆ. ಕೋಮುಗಲಭೆ ಮಾಡಿದವರ ಕೇಸ್ಗಳನ್ನು ವಾಪಾಸ್ ಪಡೆಯುತ್ತಿದೆ. ವಿಷಯಾಂತರ ಮಾಡಿಕೊಂಡು ಕಾಲ ಕಳೆಯುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ಮೇಲೆ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.
ಪ್ರಿಯಾಂಕ ಖರ್ಗೆ ಬಗ್ಗೆ ಪ್ರತಾಪ್ ಸಿಂಹ ಮಾತು !
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದ ಕುರಿತು ಮಾತನಾಡಿದ ಪ್ರತಾಪ್ ಸಿಂಹ ‘ ಪ್ರಿಯಾಂಕ್ ಖರ್ಗೆ ಹಿಟ್ ಆ್ಯಂಡ್ ರನ್ ರೀತಿ ಸ್ಪಿಟ್ ಆಂಡ್ ರಸ್ ಕೆಲಸ ಮಾಡುತ್ತಿದ್ದಾರೆ. ಹಿಂದೆ ಬಿಜೆಪಿಯ ಅವದಿಯಲ್ಲಿ ಬಿಟ್ ಕಾಯಿನ್, ಪಿಎಸ್ಐ ಹಗರಣದ ದಾಖಲೆ ಇದೆ ಕೊಡುತ್ತೇವೆ ಎಂದು ಹೇಳಿದ್ದರು. ಅದರೆ ಇದ್ಯಾವುದಕ್ಕೂ ಅವರು ದಾಖಲೆ ಬಿಡಗಡೆ ಮಾಡಿಲ್ಲ. ಇವರು ಕೇವಲ ಉಗುಳಿ ಓಡಿ ಹೋಗುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.