ದೆಹಲಿ : ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ‘ ಆಮ್ ಆದ್ಮಿ ಎಂದರೆ ಆಪತ್ತು. ಈ ಆಪತ್ತು ಕಳೆದ 10 ವರ್ಷದಿಂದ ದೆಹಲಿಯನ್ನು ಸುತ್ತುವರಿದಿದೆ ಎಂದು ಆಮ್ ಆದ್ಮಿ ಪಕ್ಷದ ವಿರುದ್ದ ವಾಗ್ಧಾಳಿ ನಡೆಸಿದರು.
ಶುಕ್ರವಾರ (ಜ.03)ರಂದು ದೆಹಲಿಯಲ್ಲಿ ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆ ಮತ್ತು ಕಾಮಗಾರಿಗಳನ್ನು ಉದ್ಘಾಟನೆ ನಡೆಸಿ ಮಾತನಾಡಿದ ಪ್ರದಾನಿ ಮೋದಿ ಆಮ್ ಆದ್ಮಿಯನ್ನು ಆಪ್ಡಾ (ವಿಪತ್ತು) ಎಂದು ಕರೆದರು. ಮುಂದುವರಿದು ಮಾತನಾಡಿದ ಮೋದಿ ‘ ಕಳೆದ 10 ವರ್ಷದಿಂದ ದೆಹಲಿಗೆ ಒಂದು ದೊಡ್ಡ ಆಪತ್ತು ಸುತ್ತುವರಿದಿದೆ. ಅಣ್ಣಾ ಹಜಾರೆಯ ಹೆಸರನ್ನು ಮುಂಚೂಣಿಯಲ್ಲಿ ಇಟ್ಟುಕೊಂಡು ಕೆಲವರು ಅಪ್ರಾಮಾಣಿಕರು, ಮತಾಂದರು ದೆಹಲಿಯನ್ನು ದುರಂತಕ್ಕೆ ತಳ್ಳಿದ್ದಾರೆ. ಮಧ್ಯ ಹಗರಣ, ನೇಮಕಾತಿ ಹಗರಣ, ಆಸ್ಪತ್ರೆ ಚಿಕಿತ್ಸೆಯಲ್ಲಿ ಹಗರಣ ಈ ರೀತಿಯಾಗಿ ದೆಹಲಿಯನ್ನು ವಿಪತ್ತಿಗೆ ತಳ್ಳಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ :
ಮುಂದುವರಿದು ಮಾತನಾಡಿದ ಮೋದಿ ‘ ಆಯುಷ್ಮಾನ್ ಭಾರತ್ ಯೋಜನೆಯನ್ನು ನಾವು ಇಡೀ ದೇಶದಲ್ಲಿ ಜಾರಿಗೊಳಿಸಿದ್ದೇವೆ. ಆದರೆ ಆಪ್ ಸರ್ಕಾರ ಈ ಯೋಜನೆಯನ್ನು ದೆಹಲಿಯಲ್ಲಿ ಜಾರಿಗೊಳಿಸಲು ಬಿಡುತ್ತಿಲ್ಲ. ಇದರಿಂದಾಗಿ ದೆಹಲಿಯ ಜನರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ನಾವು ಇವುಗಳನ್ನು ಸಹಿಸುವುದಿಲ್ಲ, ನಾವು ಇದನ್ನು ಬದಲಾಯಿಸುತ್ತೇವೆ (ಅಬ್ ನಹೀ ಸಾಹೇಂಗೆ, ಬದಲ್ ಕೆ ರಹೇಂಗೆ) ಎಂದು ಚುನವಣೆಗೆ ಹೊಸ ಘೋಷಣೆ ನೀಡಿದರು.