Sunday, January 5, 2025

ಪ್ರೀತಿಸಿದ ಹುಡುಗಿ ದೂರವಾಗಿದ್ದಕ್ಕೆ ಮನನೊಂದ ಯುವಕ ಆತ್ಮಹತ್ಯೆ !

ಬೆಂಗಳೂರು : ಪ್ರೀತಿಸಿದ ಹುಡುಗಿ ದೂರವಾಗಿದ್ದಕ್ಕೆ ಮನನೊಂದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು. ಸಾವನ್ನಪ್ಪಿದ್ದ ದುರ್ದೈವಿಯನ್ನು 25 ವರ್ಷದ ಸತೀಶ್​ ಕುಮಾರ್​ ಎಂದು ಗುರುತಿಸಲಾಗಿದೆ.

​ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಸತೀಸ್​ ಕಾಲೇಜಿನಿಂದಲೇ ಯುವತಿಯೊಬ್ಬಳ್ಳನ್ನು ಪ್ರೀತಿಸುತ್ತಿದ್ದನು. ಯುವತಿಯು ಕೂಡ ಸತೀಶ್​ನನ್ನು ಪ್ರೀತಿಸುತ್ತಿದ್ದಳು. ಇಬ್ಬರು ಜೊತೆಯಾಗಿ ಓಡಾಡಿಕೊಂಡಿದ್ದರು. ಆದರೆ ಇತ್ತೀಚೆಗೆ ಯುವತಿ ಸತೀಶ್​ನಿಂದ ದೂರವಾಗಿದ್ದಳು. ಇದರಿಂದ ಮನನೊಂದ ಸತೀಶ್​ ತನ್ನ ಮನೆಯ ರೂಮಿನಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ.‘

ಇದನ್ನೂ ಓದಿ :ಟ್ಯೂಷನ್​ ಟೀಚರ್​ನಿಂದ ವಿದ್ಯಾರ್ಥಿನಿ ಕಿಡ್ನಾಪ್​ : ಆರೋಪಿ ಸುಳಿವು ನೀಡಿದರೆ ಸಿಗುತ್ತೆ ಬಹುಮಾನ !

ಘಟನೆ ಸಂಬಂಧ ಬಾಣಸವಾಡಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು. ಮೃತದೇಹವನ್ನು ಅಂಬೇಡ್ಕರ್​ ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ ಎಂದು ಮಾಹಿತಿ ದೊರೆತಿದೆ.

 

RELATED ARTICLES

Related Articles

TRENDING ARTICLES