Sunday, January 5, 2025

ಮೆಟ್ರೋದಲ್ಲಿ ಮಹಿಳೆಯರ ಪೋಟೋ ತೆಗೆಯುತ್ತಿದ್ದ ಕಾಮುಕ ಲಾಕ್​ : 5 ಸಾವಿರ ದಂಡ ವಿಧಿಸಿದ BMRCL

ಬೆಂಗಳೂರು : ಮೆಟ್ರೋ ನಿಲ್ದಾಣದಲ್ಲಿ ಯುವತಿಯರ ಖಾಸಗಿ ಅಂಗಗಳ ಪೋಟೋ ಕ್ಲಿಕ್ಕಿಸುತ್ತಿದ್ದ ಕಿಡಿಗೇಡಿಯನ್ನು ಮೆಟ್ರೋ ಸೆಕ್ಯೂರಿಟಿ ಗಾರ್ಡ್​ಗಳು ಬಂದಿಸಿದ್ದಾರೆ. ಮೆಟ್ರೋ ರೂಲ್ಸ್​ ಸೆಕ್ಷನ್​ 59ರಡಿಯಲ್ಲಿ ಆರೋಪಿಗೆ 5 ಸಾವಿರ ದಂಡ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.

ಮಹೇಶ್​ ಎಂಬಾತ ಮೆಟ್ರೋದಲ್ಲಿ ಪ್ರಯಾಣಿಸುವ ಮಹಿಳೆಯರ ಖಾಸಗಿ ಅಂಗಗಳ ಪೋಟೋವನ್ನು ಕ್ಲಿಕ್ಕಿಸುತ್ತಿದ್ದ. ಈ ವೇಳೆ ಇದನ್ನು ಗಮನಿಸಿದ್ದ ಯುವತಿಯೊಬ್ಬಳು ಮಹೇಶನಿಗೆ ನಾಲ್ಕು ಬಾರಿಸಿದ್ದಾಳೆ. ಈ ಸಮಯದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಸುಜೀತ್​ ಮತ್ತು ಎಸ್​.ಜಿ ರಾಮ್​ ಬಹದ್ದೂರ್​ ತಾಪಾ ಎಂಬ ಸೆಕ್ಯೂರಿಟಿಗಳು ಯುವತಿಯ ಸಹಾಯಕ್ಕೆ ದಾವಿಸಿದ್ದಾರೆ.

ಇದನ್ನೂ ಓದಿ :IND vs AUS Test : ರೋಹಿತ್​ಗೆ ವಿಶ್ರಾಂತಿ ನೀಡಿ, ಬುಮ್ರಾಗೆ ನಾಯಕತ್ವ ವಹಿಸುತ್ತಾರಾ ಗಂಭೀರ

ಯುವತಿಯ ಬಳಿ ವಿಶಯವನ್ನು ತಿಳಿದ ಸೆಕ್ಯೂರಿಟಿಗಳು ಮಹೇಶನನ್ನು ಜಯನಗರ ಮೆಟ್ರೋ ನಿಲ್ಧಾಣದಲ್ಲಿ ಕೆಳಗಿಳಿಸಿ ಪೋನ್​ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಹೇಶನ ಮೊಬೈಲ್​ ಯುವತಿಯರ ಪೋಟೊಗಳನ್ನು ತೆಗೆದಿರುವುದು ಬೆಳಕಿಗೆ ಬಂದಿದೆ. ಮೆಟ್ರೋ ರೂಲ್ಸ್​ ಸೆಕ್ಷನ್​- 59ರಡಿಯಲ್ಲಿ ಮಹೇಶನಿಗೆ 5000 ಸಾವಿರ ದಂಡ ವಿಧಿಸಲಾಗಿದೆ.

ನಂತರ ಆರೋಪಿ ಮಹೇಶನನ್ನು ಜಯನಗರ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಡ್ಯೂಟಿ ಮುಗಿದ್ದಿದ್ದರು ಯುವತಿಯ ಸಹಾಯಕ್ಕೆ ದಾವಿಸಿದ ಸೆಕ್ಯೂರಿಟಿಗಳಿಗೆ BMRCL ಅಭಿನಂದನೆ ಸಲ್ಲಿಸಿದೆ.

 

RELATED ARTICLES

Related Articles

TRENDING ARTICLES