ಖಾಸಗಿ ವಾಹಿನಿಯಾದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ‘ಸರಿಗಮಪ’ ಕಾರ್ಯಕ್ರಮದ ಜ್ಯೂರಿಯಾಗಿದ್ದ ಎಸ್. ಬಾಲಿ (ಬಾಲಸುಬ್ರಮಣ್ಯಂ) ವಿಧಿವಶರಾಗಿದ್ದಾರೆ. ಅವರ ನಿಧನಕ್ಕೆ ನಿರೂಪಕಿ ಅನುಶ್ರೀ, ನಟಿ ಚಿತ್ಕಲಾ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ : ಮೋದಿ ಡೀಸಲ್ ದರ ಕಡಿಮೆ ಮಾಡಿದರೆ ಟಿಕೆಟ್ ದರವನ್ನು ಕಡಿಮೆ ಮಾಡುತ್ತೇವೆ : ರಾಮಲಿಂಗರೆಡ್ಡಿ
ರಿದಮ್ ಕಿಂಗ್ ಎಂದೆ ಹೆಸರಿ ಪಡೆದಿದ್ದ ಬಾಲಿಯವರು ತಮ್ಮ 71ನೇ ವಯಸ್ಸಿನಲ್ಲಿ ಕೊನೆ ಉಸಿರೆಳೆದಿದ್ದಾರೆ. ಸರಿಗಮಪ ಕಾರ್ಯಕ್ರಮದಲ್ಲಿ ಜ್ಯೂರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಇವರು ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದರು. ಇವರ ಸಂಗೀತ ಕ್ಷೇತ್ರದಲ್ಲಿನ ಸಾಧನೆಗಳಿಗೆ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಗಳು ದಕ್ಕಿವೆ.
ಇವರ ನಿಧನಕ್ಕೆ ನಿರೂಪಕಿ ಅನುಶ್ರೀ, ಸೇರಿದಂತೆ ಅನೇಕರ ಗಣ್ಯರು ಸಂತಾಪ ಸೂಚಿಸಿದ್ದಾರೆ.