Sunday, January 5, 2025

100 ಕೋಟಿ ಕ್ಲಬ್​ ಸೇರಿದ ಕಿಚ್ಚ ಸುದೀಪ್​ ಅಭಿನಯದ ‘ಮ್ಯಾಕ್ಸ್’ ಚಿತ್ರ​​!

ಬೆಂಗಳೂರು: ಸ್ಯಾಂಡಲ್​ವುಡ್​ನ ಬಹುನಿರೀಕ್ಷಿತ ಚಿತ್ರ ಕಿಚ್ಚ ಸುದೀಪ ಅಭಿನಯದ ಮ್ಯಾಕ್ಸ್​​​ ದಿ ಮೂವಿ ಚಿತ್ರವು ಡಿಸೆಂಬರ್​ 25ರಂದು ವಿಶ್ವದಾದ್ಯಂತ ಬಿಡುಗಡೆಗೊಂಡು ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಸದ್ಯ ಈ ಚಿತ್ರವು ನೂರು ಕೋಟಿ ಕ್ಲಬ್​ ಸೇರುವ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್​ ಮಾಡಿದೆ.

ಮೊದಲಿಗೆ ಕನ್ನಡ ಭಾಷೆಯಲ್ಲಿ ತೆರೆಕಂಡ ಚಿತ್ರ ಮೊದಲ ದಿನವೇ ಭರ್ಜರಿ ಓಪನಿಂಗ್​ ಪಡೆದುಕೊಂಡು ಯಶಸ್ವಿ ಪ್ರದರ್ಶನವಾಗುತ್ತಿದ್ದು, ಚಿತ್ರರಸಿಕರ ಮನಗೆದ್ದು ಹಂತ ಹಂತವಾಗಿ ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲೂ ಸಹ ಚಿತ್ರ ತೆರೆಕಂಡು ಅಲ್ಲೂ ಸಹ ಚಿತ್ರದ ಬಗ್ಗೆ ಉತ್ತಮ ರೆಸ್ಪಾನ್ಸ್​ ಪಡೆದುಕೊಂಡು ಮುನ್ನುಗುತ್ತಿದೆ.

ಸದ್ಯ ಚಿತ್ರದ ಬಿಡುಗಡೆಗೊಂಡು 8 ದಿನವಾಗಿದ್ದು ವಿಶ್ವದಾದ್ಯಂತ 100 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ ಎಂದು ಇಂಡಿಯನ್​ ಬಾಕ್ಸ್​ಆಫೀಸ್​ ಎಕ್ಸ್​ ಖಾತೆ ಬರೆದು ಕಿಚ್ಚ ಸುದೀಪ ಅವರನ್ನು ಟ್ಯಾಕ್​ ಮಾಡಿದ್ದಾರೆ. ಆದರೆ, ಚಿತ್ರದ ನಿರ್ಮಾಪಕ, ವಿತರಕರು ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಕೊಟ್ಟಿಲ್ಲ. ಹೀಗಾಗಿ ಈ ವಿಚಾರಕ್ಕೆ ಹೇಗೆ ಪ್ರತಿಕ್ರಿಯೆ ನೀಡಲಿದ್ದಾರೆ ಎಂದು ಕಾದುನೋಡಬೇಕಿದೆ.

RELATED ARTICLES

Related Articles

TRENDING ARTICLES