ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ರಾಜ್ಯದ ಸಂಪುಟ ಸಚಿವರು ಮತ್ತು ಕಾಂಗ್ರೆಸ್ ಶಾಸಕರಿಗೆ ತಮ್ಮ ಹೆಸರಿನಲ್ಲಿ ನೋಂದಾಯಿಸಲಾದ ಎಲ್ಲಾ ಐದು ವಿದ್ಯುತ್ ಮೀಟರ್‌ಗಳ ಮೇಲಿನ ಸಬ್ಸಿಡಿಯನ್ನು ಸ್ಥಗಿತಗೊಳಿಸಿದ್ದಾರೆ.
ಹಿಮಾಚಲ ಪ್ರದೇಶ ಆರ್ಥಿಕ ಬಿಕ್ಕಟ್ಟಿನ ಸಂಕಷ್ಟದಲ್ಲಿದ್ದು. ಇದೀಗ ರಾಜ್ಯವನ್ನು ಆರ್ಥಿಕ ದಿವಾಳಿತನದಿಂದ ತಪ್ಪಿಸಲು ವಿದ್ಯುತ್ ಸಬ್ಸಿಡಿಗಳನ್ನು ಸ್ಥಗಿತ ಮಾಡಲು ನಿರ್ಧರಿಸಿದೆ. ಇದರ ಕುರಿತುಹಿಮಾಚಲ ಪ್ರದೇಶ ರಾಜ್ಯ ವಿದ್ಯುತ್ ಮಂಡಳಿ ಅಧ್ಯಕ್ಷ ಸಂಜಯ್ ಗುಪ್ತಾ ಅವರಿಗೆ ಅಗತ್ಯ ನಮೂನೆಗಳನ್ನು ಸಲ್ಲಿಸಿದ್ದು, ಶ್ರೀಮಂತ ನಾಗರಿಕರು ಸಹ ಇದನ್ನು ಅನುಸರಿಸುವಂತೆ ಮನವಿ ಮಾಡಿದ್ದಾರೆ ಎಂದು ಮಾಹಿತಿ ದೊರೆತಿದೆ.
ಇದನ್ನೂ ಓದಿ :
ಬಹು ವಿದ್ಯುತ್ ಮೀಟರ್‌ಗಳನ್ನು ಹೊಂದಿರುವ ಶ್ರೀಮಂತ ನಾಗರಿಕರು ರಾಜ್ಯದ ಅಭಿವೃದ್ಧಿಯನ್ನು ಬೆಂಬಲಿಸಲು ಸಬ್ಸಿಡಿಗಳನ್ನು ತ್ಯಜಿಸಬೇಕು ಎಂದು ಸುಖುವಿಂದರ್ ಸಿಂಗ್ ಮನವಿ ಮಾಡಿದ್ದು. ಸಾರ್ವಜನಿಕರು ಹತ್ತಿರದ ವಿದ್ಯುತ್ತ ಉಪ ವಿಭಾಗಕ್ಕೆ ಭೇಟಿ ನೀಡಿ ಆನ್ಲೈನ್ ಪೋರ್ಟಲ್ ಮೂಲಕ ತಮಗೆ ನೀಡುತ್ತಿರುವ ಸಬ್ಸಿಡಿಗಳನ್ನು ತ್ಯಜಿಸಲು ಸೂಚಿಸಿದ್ದಾರೆ.
ವಿದ್ಯುತ್ ಸಬ್ಸಿಡಿಗಾಗಿ ವಾರ್ಷಿಕ 2,200 ಕೋಟಿ ರೂ. ಮತ್ತು ವಿದ್ಯುತ್ ಮಂಡಳಿಯ ನೌಕರರ ವೇತನ ಮತ್ತು ಪಿಂಚಣಿಗಾಗಿ ಮಾಸಿಕ 200 ಕೋಟಿ ರೂ.ಗಳನ್ನು ಸರ್ಕಾರ ಖರ್ಚು ಮಾಡುತ್ತಿದೆ ಎಂದು ಸಿಎಂ ಸುಖು ತಿಳಿಸಿದ್ದಾರೆ ಹಾಗೂ ಜನವರಿ 01 ರಿಂದ ಸರ್ಕಾರಿ ನೌಕರರು ಗ್ರೇಡ್ 01 ಮತ್ತು ಗ್ರೇಡ್ 02ರಲ್ಲಿ ಕಾರ್ಯ ನಿರ್ವಹಿಸುವ ನೌಕರರು ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಬರಿಸುವಂತೆ ಸೂಚಿಸಿದ್ದಾರೆ.