ಬೆಂಗಳೂರು: ರಾಜಧಾನಿಯ ಪ್ರಮುಖ ಸಾರಿಗೆಯಾಗಿರುವ ಮೆಟ್ರೋ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿದ್ದು. ಹಳದಿ ಮೆಟ್ರೋ ಮಾರ್ಗದ ವಿಳಂಬದ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಮೆಟ್ರೊ ವಿಳಂಬದ ಬಗ್ಗೆ ತಮ್ಮ ಎಕ್ಷ್ ಖಾತೆಯಲ್ಲಿ ಬರೆದುಕೊಂಡಿರುವ ಸಂಸದ ತೇಜಸ್ವಿ ಸೂರ್ಯ ‘ಎಲ್ಲಾ ಅಂದು ಕೊಂಡಂತೆ ಆಗಿದ್ದರೆ 2024ರಲ್ಲಿ ಉದ್ಘಾಟನೆ ಆಗಬೇಕಿತ್ತು. ಆದರೆ ಮೆಟ್ರೋ ರೈಲುಗಳು ಸಮರ್ಪಕ ಪ್ರಮಾಣದಲ್ಲಿ ಪೂರೈಕೆ ಆಗದ ಹಿನ್ನಲೆಯಲ್ಲಿ ಉದ್ಘಾಟನೆ ದಿನಾಂಕ ಮುಂದೂಡಲಾಗುತ್ತಿದೆ. BMRCLಗೆ ನೀಡಿದ್ದ ಎಲ್ಲಾ ಗಡುವುಗಳನ್ನು ಅದು ಮೀರಿದೆ ಇದು ನಮ್ಮೆಲ್ಲರನ್ನು ನಿರಾಶೆ ಮಾಡಿದೆ ಎಂದು ರೈಲುಗಳ ಅಲಭ್ಯತೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಚಿನ್ಮಯ್ ಕೃಷ್ಣದಾಸ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಬಾಂಗ್ಲಾ ನ್ಯಾಯಾಲಯ !
ಇನ್ನು ಮುಂದಿನ ದಿನಗಳಲ್ಲಿ ಒಳ್ಳೆಯ ಸುದ್ದಿಗಳು ಇದೆ ಎಂದಿರುವ ತೇಜಸ್ವಿ ಸೂರ್ಯ ‘ ಕಳೆದ ಕೆಲವು ತಿಂಗಳಿಂದ ರೈಲುಗಳ ಉತ್ಪಾದನೆಯನ್ನು ತ್ವರಿತಗೊಳಿಸುವಂತೆ ಮನವಿ ಮಾಡಿದ್ದೇವೆ. ರೈಲುಗಳನ್ನು ತಯಾರು ಮಾಡುವ ಟಿಟಾಗಢ್ ರೈಲ್ ಸಿಸ್ಟಮ್ನೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ.
ಜನವರಿ 6ರಂದು ಮೊದಲ ರೈಲು ಬೆಂಗಳೂರನ್ನು ತಲುಪಲಿದೆ. ಜನವರಿ ಅಂತ್ಯದಲ್ಲಿ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಎರಡನೇ ರೈಲು ಮತ್ತು ಏಪ್ರೀಲ್ನಲ್ಲಿ ಮೂರನೇ ರೈಲನ್ನು ತಲುಪಿಸಲಾಗುತ್ತದೆ. ಇದಾದ ಬಳಿಕ ತಿಂಗಳೀಗೆ ಒಂದರಂತೆ ರೈಲುಗಳನ್ನು ಕಳುಹಿಸುತ್ತೇವೆ ಎಂದು ಟಿಟಾಗಢ್ ಸಂಸ್ಥೆ ಹೇಳಿದೆ.
ಮೊದಲು ಮೂರು ರೈಲುಗಳು ತಲುಪಿದ ನಂತರ ಬೆಂಗಳೂರಿನ ಎಲ್ಲೋ ಮಾರ್ಗದಲ್ಲಿ ಕಾರ್ಯಚರಣೆಯನ್ನು ಆರಂಭ ಮಾಡಲಾಗುತ್ತದೆ ಎಂದು ಬೆಂಗಳೂರು ದಕ್ಷಿಣ ಲೋಕಸಭ ಸಂಸದ ತೇಜಸ್ವಿ ಸೂರ್ಯ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.