ಚಾಮರಾಜನಗರ : ಮೈಸೂರಿನಲ್ಲಿ ಟೆಲಿಕಾಲರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಶುಭಾ ಮತ್ತು ಕಾರಿನ ಚಾಲಕ ಸುರ್ಜಿತ್ ಎಂಬವರು ಅಸುನೀಗಿದ್ದು, ಖಾಸಗಿ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುವ ಮನಿತ್ ಎಂಬಾತನನ್ನು ಬಚಾವ್ ಮಾಡಲಾಗಿದೆ.
ಮೈಸೂರಿನಲ್ಲಿ ಟೆಲಿ ಕಾಲರ್ ಆಗಿ ಕೆಲಸ ಮಾಡುತ್ತಿದ್ದ ಶುಭಾ ಮತ್ತು ಮನಿತ್ ಮಹದೇಶ್ವರ ಬೆಟ್ಟಕ್ಕೆ ಕಾರಿನಲ್ಲಿ ತೆರಳುತ್ತಿದ್ದಾಗ ತಡರಾತ್ರಿ ಚಾಲಕನ ನಿಯಂತ್ರಣ ತಪ್ಪಿ ಕಾರು ಕೊಳ್ಳೇಗಾಲದ ಕುಂತೂರು ಕೆರೆಗೆ ಪಲ್ಟಿಯಾಗಿದೆ.
ಮನಿತ್ ಎಂಬಾತ ಕಾರಿನ ಬಾನೆಟ್ ಮೇಲೆ ನಿಂತುಕೊಂಡು ಕೂಗಿಕೊಳ್ಳುತ್ತಿದ್ದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ಕೊಟ್ಟಿದ್ದಾರೆ. ಕೂಡಲೇ ದೌಡಾಯಿಸಿದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಮನಿತ್ ನನ್ನು ಕೆರೆಯಿಂದ ಮೇಲಕ್ಕೆ ಕರೆತಂದಿದ್ದಾರೆ. ಸ್ಥಳದಲ್ಲೇ, ಶುಭಾ ಹಾಗೂ ಚಾಲಕ ಸುರ್ಜಿತ್ ಮೃತಪಟ್ಟಿದ್ದಾರೆ.
ಮಾಂಬಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಚಾಮರಾಜನಗರ ಸಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿ, ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ