Sunday, January 5, 2025

ಜ್ವರಬಂದ ಮಗುವಿಗೆ ಸೌತೆಕಾಯಿ ತಿನ್ನಿಸಿದ ವಿಚಾರ: ಚಾಕುವಿನಿಂದ ಇರಿದು ತಂಗಿಯ ಕೊಲೆ ಮಾಡಿದ ಅಣ್ಣ

ಚಾಮರಾಜನಗರ : ಜ್ವರ ಬಂದಿರುವ ಮಗುವಿಗೆ ಸೌತೆಕಾಯಿ ತಿನ್ನಿಸಿದ ಕುಟುಂದವರಿಗೆ ಯುವಕ ಚಾಕುವಿನಿಂದ ಇರಿದಿದ್ದು. ಚಾಕು ಇರಿತದಲ್ಲಿ ಯುವಕನ ತಂಗಿ ಐಮಾನ್​ ಬಾನು ಸಾವನ್ನಪ್ಪಿದ್ದಾಳೆ. ಯುವಕನ ಅತ್ತಿಗೆ ಮತ್ತು ತಂದೆ ಗಂಭೀರವಾಗಿ ಗಾಯಗೊಂಡಿದ್ದಾರೆ.

ಕೊಳ್ಳೇಗಾಲ ಪಟ್ಟಣದ ಈದ್ಗಾ ಮೊಹಲ್ಲಾದಲ್ಲಿ ಘಟನೆ ನಡೆದಿದೆ. ಜ್ವರ ಬಂದಿರುವ ಮಗುವಿಗೆ ಕುಟುಂಬವರು ಸೌತೆ ಕಾಯಿ ತಿನ್ನಿಸಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆರೋಪಿ ಫಾರ್ಮನ್​ ಕುಟುಂಬದವರ ಜೊತೆ ಜಗಳ ತೆಗೆದಿದ್ದಾನೆ. ಜಗಳ ತಾರಕಕ್ಕೆ ಹೋಗಿ ಚಾಕುವಿನಿಂದ ಸ್ವಂತ ತಂದೆ, ತಂಗಿ ಮತ್ತು ಅತ್ತಿಗೆ ಮೇಲೆ ಮನಬಂದಂತೆ ಚಾಕುವಿನಿಂದ ಇರಿದಿದ್ದಾನೆ.

ಇದನ್ನೂ ಓದಿ : ಶಾರ್ಕ್​ ಸರ್ಕ್ಯೂಟ್​ಗೆ ಹೊತ್ತಿ ಉರಿಯಿತು ನಗರದ ಪ್ರತಿಷ್ಟಿತ ಬೈಕ್​ ಶೋರೂಂ !

ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ 26 ವರ್ಷದ ಐಮಾನ್​ ಭಾನು ಸ್ಥಳದಲ್ಲೆ ಸಾವನ್ನಿಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಸೈಯದ್​ ಪಾಷಾ (60) ಮತ್ತು ಸೊಸೆ ತಷ್ಲೀಮ್​ (28) ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಳುಗಳನ್ನು ಕೊಳ್ಳೇಗಾಲ ಪಟ್ಟಣದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಸ್ಥಳಕ್ಕೆ ಕೊಳ್ಳೇಗಾಲ ಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಫಾರ್ಮನ್​ನನ್ನು ಕೊಳ್ಳೇಗಾಲ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES