ಬೀದರ್ : ಬಸವಕಲ್ಯಾಣ ತಾಲೂಕಿನ ಯರಬಾಗ್ ಕ್ರಾಸ್ ಬಳಿ ಡೆಡ್ಲಿ ಆಕ್ಸಿಡೆಂಟ್ ನಡೆದಿದ್ದು, ಇಬ್ಬರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ದೊರೆತಿದೆ. ಸ್ಥಳಕ್ಕೆ ಬಸವ ಕಲ್ಯಾಣ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಸವಕಲ್ಯಾಣ ತಾಲ್ಲೂಕಿನ ನಾರಾಯಣಪೂರ ಗ್ರಾಮದ ಬಬಿತಾ ಮತ್ತು ಆಕೆಯ ಪತಿ ಪ್ರಕಾಶ್ ರೆಕುಳ ಕಾರ್ಯಕ್ರಮದ ನಿಮಿತ್ತಾ ಚಿಟಗುಪ್ಪಾ ಸಮೀಪದ ಗ್ರಾಮವೊಂದಕ್ಕೆ ಬೈಕ್ನಲ್ಲಿ ಹೋಗುತ್ತಿದ್ದರು. ಈ ವೇಳೆ ಸೊಲ್ಲಾಪುರ ಕಡೆಯಿಂದ ವೇಗವಾಗಿ ಬರುತ್ತಿದ್ದ ಸ್ಕಾರ್ಫಿಯೋ ಕಾರು ಬೈಕ್ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ಪಲ್ಟಿಯಾಗಿದ್ದು. ಕಾರಿನಲ್ಲಿದ್ದವರಿಗು ಸಣ್ಣ ಪುಟ್ಟ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓಧಿ : ಜಿಂಕೆ ಹಿಂಡಿಗೆ ಕಣ್ಣಿಟ್ಟು ಅಟ್ಟಾಡಿಸಿದ ಚಿರತೆಗೆ ಚಳ್ಳೆಹಣ್ಣು
ಡಿಕ್ಕಿಯಾಗುತ್ತಿದ್ದಂತೆ ದಂಪತಿಗಳು ನೆಲಕ್ಕೆ ಬಿದ್ದಿದ್ದು. ಪತ್ನಿ ಬಬಿತಾ ಸ್ಥಳದಲ್ಲೆ ಸಾವನ್ನಪ್ಪಿದ್ದಾಳೆ. ತೀವ್ರವಾಗಿ ಗಾಯಗೊಂಡಿದ್ದ ಪತಿಯನ್ನು ಆಸ್ಪತ್ರೆಗೆ ದಾಖಲಿಸಲಾದರೂ ಕೂಡ ಪತಿ ಪ್ರಕಾಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಬಸವ ಕಲ್ಯಾಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಮಾಹಿತಿ ದೊರೆತಿದೆ.