ಚಾಮರಾಜನಗರ: ಬಂಡೀಪುರ ಸಫಾರಿಗೆ ತೆರಳಿದ್ದವರಿಗೆ ಭರ್ಜರಿ ಚಿರತೆ ಬೇಟೆ ಹಾಗೂ ಹೆಬ್ಬುಲಿ ದರ್ಶನವಾಗಿದ್ದು ಪ್ರವಾಸಿಗರು ಸಖತ್ ಥ್ರಿಲ್ ಆಗಿದ್ದಾರೆ.
ಜಿಂಕೆ ಹಿಂಡಿಗೆ ಕಣ್ಣಿಟ್ಟ ಚಿರತೆಯೊಂದು ಮೊದಲು ಜಿಂಕೆ ಮರಿ ಅಟ್ಟಾಡಿಸಿದೆ ಆದರೆ ಮಿಂಚಿನಂತೆ ಅದು ಓಟ ಕಿತ್ತಿದೆ. ಗುಂಪಿನಲ್ಲಿದ್ದ ಮತ್ತೊಂದು ಜಿಂಕೆಯನ್ನೂ ಚಿರತೆ ಅಟ್ಟಾಡಿಸಿದ್ದು ಅದೂ ಕೂಡ ಚಿರತೆಗೆ ಚಳ್ಳೆಹಣ್ಣು ತಿನ್ನಿಸಿ ಪರಾರಯಾಗಿದೆ. ಚಿರತೆ ಶರವೇಗದ ಓಟವನ್ನೂ ಮೀರಿಸಿ ಜಿಂಕೆ ಪರಾರಿಯಾಗಿದ್ದು ಪ್ರವಾಸಿಗರನ್ನು ರೋಮಾಂಚನಗೊಳಿಸಿದೆ.
ಇನ್ನು, ಸಫಾರಿಗರಿಗೆ ಹೆಬ್ಬುಲಿಯ ದರ್ಶನವೂ ಸಿಕ್ಕಿದ್ದು ರಗಡ್ ಲುಕ್ ನಲ್ಲಿ ಹೆಜ್ಜೆ ಹಾಕಿದ ಹುಲಿ ಕಂಡ ಸಫಾರಿಗರು ಫಿದಾ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಸಖತ್ ವೈರಲ್ಲಾಗಿದೆ.