Wednesday, January 8, 2025

ವಿವಾದಕ್ಕೆ ಕಾರಣವಾದ ಥರ್ಡ್​ ಅಂಪೈರ್​ ತೀರ್ಪು: ಜೈಸ್ವಾಲ್​ ನಾಟೌಟ್​ ಎನ್ನುತ್ತಿರುವ ಕ್ರಿಕೆಟ್​ ಪ್ರಿಯರು!

ಮೆಲ್ಬೋರ್ನ್:​​ ಆಸ್ಟ್ರೇಲಿಯಾ-ಭಾರತ ನಡುವಣ 4ನೇ ಟೆಸ್ಟ್ ಪಂದ್ಯದಲ್ಲಿ ಮೂರನೇ ಅಂಪೈರ್ ನೀಡಿದ ತೀರ್ಪುವೊಂದು ವಿವಾದಕ್ಕೀಡಾಗಿದೆ. ಈ ಪಂದ್ಯದ ದ್ವಿತೀಯ ಇನಿಂಗ್ಸ್​ನಲ್ಲಿ 71ನೇ ಓವರ್​ನಲ್ಲಿ ಯಶಸ್ವಿ ಜೈಸ್ವಾಲ್ ಅವರಿಗೆ ನೀಡಿದ ತೀರ್ಪು ಇದೀಗ ಕ್ರಿಕೆಟ್​ ಪ್ರೇಮಿಗಳನ್ನು ಸೇರಿದಂತೆ ಅನೇಕರ ಅಸಮಧಾನಕ್ಕೆ ಕಾರಣವಾಗಿದೆ.

ಪ್ಯಾಟ್ ಕಮಿನ್ಸ್ ಬೌಲಿಂಗ್​ ಮಾಡಿದ 71ನೇ ಓವರ್​ನಲ್ಲಿ ಯಶಸ್ವಿ ಹಿಂದೆ ತಿರುಗಿ ಭರ್ಜರಿ ಹೊಡೆತಕ್ಕೆ ಮುಂದಾದರು. ಆದರೆ ಈ ವೇಳೆ ಚಂಡು ಬ್ಯಾಟ್​ ಸಮೀಪದಲ್ಲಿ ಸಾಗಿ ವಿಕೆಟ್​ ಕೀಪರ್​ ಕೈಸೇರಿತು. ಇದರ ಬೆನ್ನಲ್ಲೆ ವಿಕೆಟ್​ ಕೀಪರ್​ ಅಲೆಕ್ಸ್​ ಕ್ಯಾರಿ ಸೇರಿದಂತೆ ಆಸ್ಟ್ರೇಲಿಯ ತಂಡದ ಆಟಗಾರರು ವಿಕೆಟ್​ಗಾಗಿ ಮನವಿ ಮಾಡಿದರು. ಆದರೆ ಈ ವೇಳೆ ಫಿಲ್ಡ್​ನಲ್ಲಿದ್ದ ಅಂಪೈರ್​ ಈ ಮನವಿಯನ್ನು ತಿರಸ್ಕರಿಸಿದರು. ಈ ವೇಳೆ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್​ ಕಮಿನ್ಸ್​ ಥರ್ಡ್​ ಅಂಪೈರ್​​ ಮೊರೆ ಹೋದರು.

ಇದನ್ನೂ ಓದಿ : ನಾಲ್ಕನೇ ಟೆಸ್ಟ್​ ಪಂದ್ಯದಲ್ಲಿ ಭಾರತಕ್ಕೆ ಸೋಲು : 2-1 ಅಂತರದ ಮುನ್ನಡೆ ಕಾಯ್ದುಕೊಂಡ ಆಸೀಸ್​ !

ಮೂರನೇ ಅಂಪೈರ್​ ಪರಿಶೀಲನೆ ವೇಳೆ ಚೆಂಡು ಬ್ಯಾಟ್​ ಬಳಿಯಲ್ಲಿ ಸಾಗಿರುವಂತೆ ಕಂಡು ಬಂದರು ಕೂಡ ಸ್ನೀಕೋ ಮೀಟರ್​ನಲ್ಲಿ ಯಾವುದೇ ಸ್ಪೈಕ್​ ಕಾಣಿಸಿರಲಿಲ್ಲ. ಆದರೆ ಚಂಡಿನ ಚಲನೆಯನ್ನು ಸಾಕಷ್ಟು ಬಾರಿ ಪರಿಶೀಲನೆ ನಡೆಸಿದ ಥರ್ಡ್​ ಅಂಪೈರ್​ ಚೆಂಡಿನ ಚಲನೆ ಬದಲಿಸಿರುವುದನ್ನು ಪರಿಗಣಿಸಿ ಔಟ್​ ಕೊಟ್ಟಿದ್ದಾರೆ. ಥರ್ಡ್​ ಅಂಪೈರ್​ ತೀರ್ಪಿನ ಬಗ್ಗೆ ಜೈಸ್ವಾಲ್​ ಅಸಮಧಾನ ವ್ಯಕ್ತಪಡಿಸಿದ್ದು. ಫಿಲ್ಡ್​ ಅಂಪೈರ್​ ಮನವೊಲಿಸಿ ಜೈಸ್ವಾಲ್​ರನ್ನು ಫಿಲ್ಡ್​ನಿಂದ ಹೊರಗೆ ಕಳಿಸಿದರು.

ತೀರ್ಪಿನ ಬಗ್ಗೆ ಕ್ರಿಕೆಟ್​ ಪ್ರಿಯರ ಆಕ್ರೋಶ !

ಜೈಸ್ವಾಲ್​ ಬಗ್ಗೆ ನೀಡಿದ ತೀರ್ಪಿನ ವಿರುದ್ದವಾಗಿ ಕ್ರಿಕೆಟ್ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದು. ಜೈಸ್ವಾಲ್​ ಅವರ ಬಾಲ್ಯದ ಕೋಚ್​ ಖಾಸಗಿ ವಾಹಿನಿಗೆ ನೀಡಿದ ಹೇಳಿಕೆಯಲ್ಲಿ ಅಸಮಧಾನ ವ್ಯಕ್ತಪಡಿಸಿದ್ದಾರೆ. ಮಾಜಿ ಬಿಸಿಸಿಐ ಉಪಧ್ಯಕ್ಷ ರಾಜೀವ್​ ಶುಕ್ಲಾ ಅವರು ಕೂಡ ಟ್ವಿಟ್​ ಮಾಡುವ ಮೂಲಕ ಅಸಮಧಾನ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES