ನವದೆಹಲಿ: ಮನಮೋಹನ್ ಸಿಂಗ್ ನಿಧನ ಹಿನ್ನಲೆ ಏಳು ದಿನಗಳ ರಾಷ್ಟ್ರೀಯ ಶೋಕಾಚರಣೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ವಿಯೆಟ್ನಾಂ ಪ್ರವಾಸದ ಕುರಿತು ಸೋಮವಾರ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ರಾಜಕೀಯ ಹಣಾಹಣಿ ಏರ್ಪಟ್ಟಿದೆ. ರಾಹುಲ್ ಅವರ ಕ್ರಮವನ್ನು ಬಿಜೆಪಿ ಮಾಜಿ ಪ್ರಧಾನಿಗೆ “ಅಗೌರವ” ಎಂದು ಬಣ್ಣಿಸಿದೆ, ಆದರೆ ಕಾಂಗ್ರೆಸ್ ಇದನ್ನು “ವೈಯಕ್ತಿಕ ಪ್ರವಾಸ” ಎಂದು ಕರೆದಿದೆ.
ಬಿಜೆಪಿ ವಕ್ತಾರ ಅಮಿತ್ ಮಾಳವಿಯಾ ಅವರು, “ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಿಧನಕ್ಕೆ ದೇಶವು ಶೋಕಿಸುತ್ತಿರುವಾಗ, ಹೊಸ ವರ್ಷವನ್ನು ಆಚರಿಸಲು ರಾಹುಲ್ ಗಾಂಧಿ ವಿಯೆಟ್ನಾಂಗೆ ಹಾರಿದ್ದಾರೆ” ಎಂದು ಬಿಜೆಪಿ ವಕ್ತಾರ ಅಮಿತ್ ಮಾಳವಿಯಾ ಹೇಳಿದ್ದಾರೆ. ಇದರ ಜೊತೆಗೆ ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬ ಸಿಖ್ಖರನ್ನು ದ್ವೇಶಿಸುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : ಸಕಾಲಕ್ಕೆ ಸಿಗದ ಚಿಕಿತ್ಸೆ : ಗರ್ಭದಲ್ಲೆ ಸಾವನ್ನಪ್ಪಿದ ಮಗು , ಮಹಿಳೆ ಸ್ಥಿತಿ ಗಂಭೀರ !
ಈ ಘಟನೆ ಇದೀಗ ರಾಜಕೀಯ ತಿರುವನ್ನು ಪಡೆದುಕೊಂಡಿದ್ದು. ಮೋದಿ ಸರ್ಕಾರ ಮನಮೋಹನ್ ಸಿಂಗ್ ಅವರಿಗೆ ಯುಮುನ ನದಿ ತಟದಲ್ಲಿ ಸ್ಮಾರಕ ನಿರ್ಮಾಣ ಮಾಡಲು ಅವಕಾಶ ನೀಡಿಲ್ಲ ಎಂದು ಕಾಂಗ್ರೆಸ್ ಮುಖಂಡರು ಬಿಜೆಪಿಯನ್ನು ದೂಶಿಸಿದ್ದಾರೆ ಎಂದು ತಿಳಿದು ಬಂದಿದೆ.